ಬೆಂಗಳೂರು: ಸಿಲಿಕಾನ್ ಸಿಟಿ ನಾಗರಿಕರ ಪ್ರಿಯವಾದ ಸ್ಥಳ ಲಾಲ್ಬಾಗ್ನಲ್ಲಿ ಕೊರೊನಾ ಭೀತಿಯಲ್ಲೂ ಭಾನುವಾರ ವಾಕಿಂಗ್ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.
ಕೊರೊನಾ ಆತಂಕದಲ್ಲೂ ಲಾಲ್ಬಾಗ್ನಲ್ಲಿ ಹೆಚ್ಚಿದ ಜನಸಂದಣಿ
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಭೀತಿಯ ನಡುವೆಯೂ ಸಸ್ಯಕಾಶಿ ಲಾಲ್ಬಾಗ್ನಲ್ಲಿ ವಾಕಿಂಗ್ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.
ಲಾಲ್ಬಾಗ್ನಲ್ಲಿ ಹೆಚ್ಚಿದ ಜನ ಸಂದಣಿ
ಲಾಲ್ಬಾಗ್ಗೆ ಬರುತ್ತಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ಹೀಗಿದ್ದರೂ ಕೆಂಪುತೋಟಕ್ಕೆ ಬೆಳ್ಳಂಬೆಳಗ್ಗೆ ವಾಕಿಂಗ್ ಮಾಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಕೊರೊನಾದಿಂದ ದೇಶದಲ್ಲಿ ಎರಡು ತಿಂಗಳು ಲಾಕ್ಡೌನ್ ಇದ್ದ ಕಾರಣ ದೇಶದ ಆರ್ಥಿಕ ಪರಿಸ್ಥಿತಿ ಕುಗ್ಗಿ ಹೋಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಜೊತೆಗೆ ಬದುಕೋದನ್ನು ಕಲಿಯಬೇಕು. ಈಗ ನಮಗೆ ಕೊರೊನಾ ಬಗ್ಗೆ ಭಯ ಇಲ್ಲ, ಅದರ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಜೀವನ ನಡೆಸಬೇಕು ಅಂತ ಕೆಲವರು ಅಭಿಪ್ರಾಯಪಟ್ಟರು.