ಬೆಂಗಳೂರು:ಮಗು ಜನಿಸಿತೆಂದು ಸಂತೋಷ ಕೂಟ ಆಯೋಜಿಸಿದ್ದ ಯುವಕನ ಮೇಲೆ ಆತನ ಗೆಳೆಯರೇ ಹಲ್ಲೆ ನಡೆಸಿರುವ ಘಟನೆ ರಾಜಧಾನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ತಿಂಗಳು 28ರಂದು ಘಟನೆ ನಡೆದಿತ್ತು. ರಂಗನಾಥ್ ಹಲ್ಲೆಗೊಳಗಾಗಿದ್ದು ಈ ಸಂಬಂಧ ಸ್ನೇಹಿತರಾದ ಮಧುಸೂದನ್, ಮನೋಜ್ ಕುಮಾರ್, ಪ್ರಸಾದ್ ಎಂಬುವರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಂಗನಾಥ್ ಅಮೃತಹಳ್ಳಿ ನಿವಾಸಿಯಾಗಿದ್ದು, ಜೀವನಕ್ಕಾಗಿ ಸ್ವಿಗ್ಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಸ್ನೇಹಿತರು ಸಹ ಜೊಮಾಟೊದಲ್ಲಿ ಡೆಲಿವರಿಯಾಗಿ ಕೆಲಸ ಮಾಡುತ್ತಿದ್ದರು. ಒಂದೇ ಮನೆಯಲ್ಲಿ ಕಳೆದ ಐದಾರು ತಿಂಗಳಿಂದ ವಾಸ ಮಾಡುತ್ತಿದ್ದರು.
ಇದನ್ನೂ ಓದಿ:ಕೋರ್ಟ್ ಆವರಣದಲ್ಲೇ ಪಾತಕಿ ಮುಖ್ತಾರ್ ಅನ್ಸಾರಿ ಆಪ್ತನಿಗೆ ಗುಂಡಿಕ್ಕಿ ಹತ್ಯೆ: ವಕೀಲರ ವೇಷದಲ್ಲಿ ಬಂದು ಕೃತ್ಯ!
ಕಾಂಗ್ರೆಸ್ಗೆ ಬೈದಿದ್ದಕ್ಕೆ ಹಲ್ಲೆ:ಆರೋಪಿಗಳ ಪೈಕಿ ಮನೋಜ್ ಕುಮಾರ್ ನಾಲ್ಕು ವರ್ಷಗಳಿಂದ ರಂಗನಾಥ್ಗೆ ಸ್ನೇಹಿತನಾಗಿದ್ದ. ಇತ್ತೀಚೆಗೆ ರಂಗನಾಥ್ಗೆ ಗಂಡು ಮಗುವಾದ ಹಿನ್ನೆಲೆಯಲ್ಲಿ ಖುಷಿಗಾಗಿ ಎಣ್ಣೆ ಪಾರ್ಟಿ ಆಯೋಜಿಸಿದ್ದ. ಬಾರ್ಗೆ ತೆರಳಿ ಮದ್ಯ ಖರೀದಿಸಿ ಒಟ್ಟಿಗೆ ಸ್ನೇಹಿತರು ರೂಮ್ನಲ್ಲಿ ಪಾರ್ಟಿ ಮಾಡಿದ್ದಾರೆ. ಸಂಭ್ರಮದಲ್ಲಿ ರಾಜಕೀಯ ವಿಚಾರ ಮುನ್ನೆಲೆಗೆ ಬಂದಿತ್ತು. ಆರೋಪಿಗಳು ಕಾಂಗ್ರೆಸ್ ಪರವಾಗಿ ಮಾತನಾಡುತ್ತಿದ್ದರು. ಇದನ್ನು ವಿರೋಧಿಸಿದ ರಂಗನಾಥ್ ಬಿಜೆಪಿ ಪರವಾಗಿ ಮಾತನಾಡಿ ಕಾಂಗ್ರೆಸ್ಗೆ ಬೈದಿದ್ದಾನೆ. ಈ ವಿಚಾರಕ್ಕಾಗಿ ಪರಸ್ಪರ ವಾದ, ಪ್ರತಿವಾದ ನಡೆದಿದೆ.
ಇದನ್ನೂ ಓದಿ:ನೈತಿಕ ಪೊಲೀಸ್ಗಿರಿ ಪ್ರಕರಣ: ಹಲ್ಲೆಗೊಳಗಾಗಿದ್ದ ಯುವಕನ ಸಹೋದರನಿಂದ ಪೊಲೀಸ್ ಕಮಿಷನರ್ಗೆ ದೂರು