ಬೆಂಗಳೂರು:ವೈಷ್ಣವಿ ಬಿಲ್ಡರ್ಸ್ ಮುಖ್ಯಸ್ಥರ ಪುತ್ರ ದರ್ಶನ್ ಮೇಲೆ ಹಲ್ಲೆ ನಡೆಸಿದ್ದ ಆತನ ಸ್ನೇಹಿತ ಆರೋಪಿ ವೇದಾಂತ್ ದುಗಾರ್ನನ್ನು ಬೆಂಗಳೂರು ಏರ್ಪೋರ್ಟ್ನಲ್ಲಿ ವಶಕ್ಕೆ ಪಡೆಯಲಾಗಿದೆ. ಮೇ 9ರಂದು ರಾತ್ರಿ ದರ್ಶನ್ ಮೇಲೆ ಹಲ್ಲೆ ನಡೆಸಿದ್ದ ವೇದಾಂತ್ ಮುಂಬೈಗೆ ತೆರಳಿ ಅಲ್ಲಿಂದ ತನ್ನ ಪ್ರೈವೇಟ್ ಜೆಟ್ ಬಳಸಿ ನೇಪಾಳಕ್ಕೆ ಪರಾರಿಯಾಗಿದ್ದರು.
ಕಳೆದ ಒಂದೂವರೆ ತಿಂಗಳಿನಿಂದ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದ ಆರೋಪಿಯ ಪತ್ತೆಗಾಗಿ ಪೊಲೀಸರು ಎಲ್ಒಸಿ (ಲುಕ್ ಔಟ್ ಸರ್ಕ್ಯೂಲರ್) ಹೊರಡಿಸಿದ್ದರು. ಜೂನ್ 24ರಂದು ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಆರೋಪಿಯನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ಆರ್.ಟಿ. ನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Hunsur murder case: ಹುಣಸೂರಿನ ಜೋಡಿ ಕೊಲೆ ಪ್ರಕರಣ.. ಬಾಲಾಪರಾಧಿ ಸೇರಿ ಮೂವರ ಬಂಧನ
ಪ್ರಕರಣ ಹಿನ್ನೆಲೆ:ಜೂನ್ 9ರಂದು ಸಂಜೆ ಆರ್. ಟಿ. ನಗರದ ಖಾಸಗಿ ಹೋಟೆಲ್‌ನಲ್ಲಿ ಸ್ನೇಹಿತನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ವೈಷ್ಣವಿ ಬಿಲ್ಡರ್ಸ್ ಮಾಲೀಕ ಗೋವಿಂದರಾಜು ಪುತ್ರ ದರ್ಶನ್ ಹಾಗೂ ವಿಎಆರ್ ಬಿಲ್ಡರ್ಸ್ ಸಂಜಯ್ ದುಗಾರ್ ಪುತ್ರ ವೇದಾಂತ್ ದುಗಾರ್ ಬಂದಿದ್ದರು.
ಇಬ್ಬರೂ ಸ್ನೇಹಿತರೇ ಆಗಿದ್ದು, ವೇದಾಂತ್ ದುಗಾರ್ ಮತ್ತು ದರ್ಶನ್ ಕಳೆದ ಕೆಲ ದಿನದ ಹಿಂದೆ ರೆಸ್ಟೋರೆಂಟ್ನಲ್ಲಿ ಎದುರು ಬದುರಾಗಿದ್ದಾಗ ವೇದಾಂತ್ ನನ್ನ ಮಾತನಾಡಿಸದೇ ದರ್ಶನ್ ಹೊರಟುಹೋಗಿದ್ದ. ಮತ್ತೆ ಹೋಟೆಲ್‌ನಲ್ಲಿ ಇಬ್ಬರು ಮುಖಾಮುಖಿಯಾದಾಗ ಅದೇ ವಿಚಾರ ಪ್ರಸ್ತಾಪವಾಗಿತ್ತು. 'ಎಲ್ಲರೂ ನನ್ನನ್ನು ಮಾತನಾಡಿಸುತ್ತಾರೆ ನೀನ್ಯಾಕೆ ಮಾತನಾಡಿಸಲ್ಲ? ಎಂದು ದರ್ಶನ್ನನ್ನು ವೇದಾಂತ್ ದುಗಾರ್ ಪ್ರಶ್ನಿಸಿದ್ದರು. ಈ ವೇಳೆ 'ಅದು ನನ್ನಿಷ್ಟ' ಎಂದು ದರ್ಶನ್ ಉತ್ತರಿಸಿದ್ದರು. ಇದರಿಂದ ಸಿಟ್ಟಿಗೆದ್ದ ವೇದಾಂತ್, ಬಿಯರ್ ಬಾಟಲ್ನಿಂದ ದರ್ಶನ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಆರ್. ಟಿ. ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:Businessman robbed: ಬಂದೂಕು ತೋರಿಸಿ ಉದ್ಯಮಿಯ ದರೋಡೆ, ಕಾರು ಅಡ್ಡಗಟ್ಟಿ 2 ಲಕ್ಷದ ಬ್ಯಾಗ್ ದೋಚಿದ ಕಳ್ಳರು!
ಪೊಲೀಸರು ಹಿಂದೆ ಬೀಳುತ್ತಿದ್ದಂತೆ ಭಾರಿ ಪ್ಲಾನ್ ಮಾಡಿದ್ದ ವೇದಾಂತ್, ಬೆಂಗಳೂರಿನಿಂದ ವಿಮಾನದ ಮೂಲಕ ಮುಂಬೈಗೆ ತೆರಳಿದ್ದರು. ಬಳಿಕ ಬಾಂಬೆಯಲ್ಲಿ ಕಂಪನಿ ಮೀಟಿಂಗ್ ಮುಗಿಸಿದ್ದರು. ನಂತರ ತಮ್ಮ ಪ್ರೈವೇಟ್ ಜೆಟ್ ಮೂಲಕ ಭಾರತ-ನೇಪಾಳ ಗಡಿ ಭಾಗದಲ್ಲಿ ತಲೆಮರೆಸಿಕೊಂಡಿದ್ದರು. ವೇದಾಂತ್ ಕುಟುಂಬಸ್ಥರು ಮೂಲತಃ ನೇಪಳಾದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರ ಕೈಗೆ ಸಿಗಬಾರದೆಂದು ವೇದಾಂತ್ ನೇಪಾಳಕ್ಕೆ ಪರಾರಿಯಾಗಿದ್ದrಉ ಪೊಲೀಸರು ಮಾಹಿತಿ ನೀಡಿದ್ದಾರೆ.
ಹುಣಸೂರು ಜೋಡಿ ಕೊಲೆ: ಆರೋಪಿಗಳ ಬಂಧನ: ಮೈಸೂರು ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರು ಬಾಲಾಪರಾಧಿ ಸೇರಿ ಒಟ್ಟು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಸ್ನೇಹಿತನ ಮದುವೆಗೆ ಬಂದು ಬಡಿದಾಡಿಕೊಂಡ ಉದ್ಯಮಿಗಳ ಮಕ್ಕಳು!