ಬೆಂಗಳೂರು: ಕೆಲಸಕ್ಕೆ ತೆರಳಿದ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯೊಬ್ಬನಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿ ನಗರದ 1ನೇ ಹೆಚ್ಚುವರಿ ತ್ವರಿತಗತಿ ವಿಶೇಷ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎನ್. ರೂಪಾ, ಬೆಂಗಳೂರು ನಗರದ ನಿವಾಸಿ ಪ್ರಬೀರ್ ಅದಕ್ ಅಲಿಯಾಸ್ ಗಣೇಶ್ ಅದಕ್ (42) ಅಪರಾಧಿಯೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಸಂತ್ರಸ್ತೆಯ ಬಾಲಕಿಯ ಪೋಷಕರು ಅಪರಾಧಿ ಪ್ರಬೀರ್ ಅದಕ್‌ನನ್ನು ಕಾರ್ಪೆಂಟಿಂಗ್ ಕೆಲಸಕ್ಕಾಗಿ 2017ರ ಆಗಸ್ಟ್ 17ರಂದು ಮನೆಗೆ ಕರೆದುಕೊಂಡು ಹೋಗಿದ್ದರು. ಅಂದು ಸಂಜೆ 5 ಗಂಟೆಗೆಯವರೆಗೆ ಕೆಲಸ ಮಾಡಿದ್ದ ಪ್ರಬೀರ್ ಅದಕ್ನಲ್ಲಿ ನಂತರ ರೂಮಿನಲ್ಲಿ ಪೆನ್ ಸ್ಟ್ಯಾಂಡ್ ಅಳವಡಿಸಬೇಕು ಎಂದು ತಿಳಿಸಿದಾಗ, ಸಂತ್ರಸ್ತೆಯನ್ನು ಸಹಾಯಕ್ಕೆ ಕರೆದಿದ್ದ. ಗೋಡೆ ಮೇಲೆ ಮಾರ್ಕ್ ಮಾಡಿಕೊಳ್ಳುವುದಕ್ಕಾಗಿ ಪೆನ್ ಸ್ಟ್ಯಾಂಡ್‌ನ್ನು ಹಿಡಿದುಕೊಳ್ಳುವಂತೆ ಅಪರಾಧಿ ಸಂತ್ರಸ್ತೆಗೆ ತಿಳಿಸಿದ್ದ.