ಬೆಂಗಳೂರು : ಖಾಸಗಿ ಕಾಲೇಜು ವಿದ್ಯಾರ್ಥಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಆತನ ಸಾವಿಗೆ ಕಾರಣರಾಗಿದ್ದ ಆರು ಜನ ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್, ಅಭಿಷೇಕ್, ನೆಲ್ಸನ್, ಯೊಹಾನ್, ಡ್ಯಾನಿಯಲ್ ಆ್ಯಂಟನಿ ಹಾಗೂ ಶ್ರೀಕಾಂತ್ ಬಂಧಿತರು.
ಹೆಣ್ಣೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಮಾರ್ವೇಶ್ (19) ಎಂಬಾತ ಬುಧವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಎಂದಿನಂತೆ ಕಾಲೇಜಿನ ಬಳಿ ಬಂದಿದ್ದ ಮಾರ್ವೇಶ್, ತೀವ್ರ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದ. ತಕ್ಷಣ ಸ್ನೇಹಿತರು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವನ್ನಪ್ಪಿದ್ದ. ಹೆಣ್ಣೂರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ :2 ವರ್ಷಗಳ ಹಿಂದೆ ನಡೆದ ಹಲ್ಲೆಯ ವಿಡಿಯೋ ಈಗ ವೈರಲ್.. ಸರಪಂಚ್ನ ಪತಿ ಸೇರಿ ಮೂವರ ಬಂಧನ
ಅಂದು ನಡೆದಿದ್ದೇನು? : ಮಾರ್ವೇಶ್‌ನ ಸ್ನೇಹಿತನೊಬ್ಬ ಯುವತಿಯೊಬ್ಬಳನ್ನು ಪ್ರೀತಿಸುವುದಾಗಿ ಹಿಂದೆ ಬಿದ್ದಿದ್ದ. ಇದೇ ವಿಚಾರವನ್ನು ಆಕೆ ತನ್ನ ಸ್ನೇಹಿತ ಶ್ರೀಕಾಂತ್ ಬಳಿ ಹೇಳಿದ್ದಳು. ಇದನ್ನು ಶ್ರೀಕಾಂತ್ ತನ್ನ ಸ್ನೇಹಿತರ ಬಳಿ ಚರ್ಚಿಸಿದಾಗ ಮಾರ್ವೇಶ್‌ನ ಮೂಲಕ ಆತನನ್ನ ಕರೆಸಲು ಮುಂದಾಗಿದ್ದರು. ಅದರಂತೆ ಶ್ರೀಕಾಂತ್ನ ಸ್ನೇಹಿತರಾದ ಯೊಹಾನ್ ಹಾಗೂ ಡೇನಿಯಲ್ ಬುಧವಾರ ಬೆಳಗ್ಗೆ ಕಾಲೇಜು ಬಳಿಯಿಂದ ಮಾರ್ವೇಶ್‌ನನ್ನು ಮಾತನಾಡುವುದಾಗಿ ಕರೆದೊಯ್ದಿದ್ದರು. ಬಳಿಕ, ಆತನನ್ನು ಕಾರ್ತಿಕ್, ಅಭಿಷೇಕ್ ಹಾಗೂ ನೆಲ್ಸನ್ನ ವಶಕ್ಕೊಪ್ಪಿಸಿದ್ದರು.