ಬೆಂಗಳೂರು: ಹಳೆ ದ್ವೇಷ ಹಿನ್ನೆಲೆ ಕಳೆದ ಜುಲೈ 11ರಂದು ರೌಡಿಶೀಟರ್ ಕಪಿಲ್ ಎಂಬುವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿ ಮಾಡಲಾಗಿದೆ.
ಕೋಕಾ ಕಾಯ್ದೆ ಬಿದ್ದರೆ ಎರಡು ವರ್ಷ ಜಾಮೀನು ಇಲ್ಲ: ಮಡಿವಾಳ ಪೊಲೀಸ್ ಠಾಣೆಯಲ್ಲಿ ಆರೋಪಿ ಶಶಿ, ಶಂಕರ್ ಪವನ್, ನವೀನ್, ರಾಹುಲ್ ಹಾಗೂ ಪುನೀತ್ ಎಂಬುವರ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಈ ಕಾಯ್ದೆ ಜಾರಿಗೊಳಿಸಲಾಗಿದೆ. ಕೋಕಾ ಕಾಯ್ದೆ ಬಿದ್ದರೆ ಎರಡು ವರ್ಷಗಳ ಕಾಲ ಜಾಮೀನು ಸಿಗುವುದಿಲ್ಲ. ಹೈಕೋರ್ಟ್ ನಲ್ಲಿ ಮಾತ್ರ ಜಾಮೀನು ಪಡೆದುಕೊಳ್ಳಬೇಕಿದೆ.
ರೌಡಿಶೀಟರ್ ಪಲ್ಯ ರವಿ ಜೈಲಿನಿಂದಲೇ ಆಪರೇಟ್ ಮಾಡಿರೋ ವಿಚಾರ ತಿಳಿದು ಬಂದಿತ್ತು. ಆರೋಪಿಗಳೆಲ್ಲರೂ ವ್ಯವಸ್ಥಿತ ಸಂಚು ರೂಪಿಸಿ ಇದೇ ತಿಂಗಳು ಜುಲೈ 11ರಂದು ಡಿ ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಪಿಲ್ನನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದರು.
ರೌಡಿಶೀಟರ್ ಕಪಿಲ್ ಹತ್ಯೆ ಪ್ರಕರಣ ಹಿನ್ನೆಲೆ:ರೌಡಿಶೀಟರ್ ಆಗಿದ್ದ ಕಪಿಲ್ ವಿರುದ್ಧ ಕೊಲೆಯತ್ನ ಸೇರಿದಂತೆ ಐದು ಪ್ರಕರಣ ದಾಖಲಾಗಿದ್ದು, 2014 ರಲ್ಲಿ ನಡೆದ ಕೊಲೆ ಕೇಸ್‌ನಲ್ಲಿ ಬಂಧಿಸಿದ್ದ ಮಡಿವಾಳ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಕೆಲ ವರ್ಷಗಳಿಂದ ಆರ್. ಟಿ. ನಗರದಲ್ಲಿ ವಾಸವಾಗಿದ್ದ ಕಪಿಲ್ ಹೆಬ್ಬಾಳ, ಆರ್. ಟಿ. ನಗರ, ಗೋವಿಂದಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನ್ನದೇ ಪಾರುಪಾತ್ಯಕ್ಕಾಗಿ ಓಡಾಡುತ್ತಿದ್ದನು. ಅಲ್ಲದೇ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಕೈ ಹಾಕುವುದಲ್ಲದೆ ಏರಿಯಾ ಹುಡುಗರೊಂದಿಗೆ ಕಿರಿಕ್ ಮಾಡಿಕೊಂಡಿದ್ದನು. ಈತನ ವಿರೋಧಿ ಬಣದ ಹುಡುಗರು ಕೊಲೆ ಮಾಡಲು ಮೂರು-ನಾಲ್ಕು ದಿನಗಳಿಂದ ಓಡಾಡಿ ಕಪಿಲ್ ನ ಚಲನವಲನ ಗಮನಿಸಿದ್ದರು. ಆರೋಪಿಗಳು ಜುಲೈ 11ರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.
ಆರೋಪಿಗಳಾದ ನವೀನ್ ಹಾಗೂ ರೋಹಿತ್ಗೆ ಮೃತ ಕಪಿಲ್ ನಡುರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಬೈದು ಅವಮಾನ ಮಾಡಿದ್ದನು. ಉದ್ದ ಕೂದಲು ಬಿಟ್ಟಿದ್ದ ನವೀನ್ಗೆ ನಡುರಸ್ತೆಯಲ್ಲೇ ಕೂದಲು ಕತ್ತರಿಸಿದ್ದ. ಹೀಗಾಗಿ ಕಪಿಲ್ ಮೇಲೆ ನವೀನ್ ದ್ವೇಷ ಇಟ್ಟುಕೊಂಡಿದ್ದ. ಇದಕ್ಕೆ ರೋಹಿತ್ ಸಹ ಕೈಜೋಡಿಸಿದ್ದ. ಅಲ್ಲದೆ ಪವನ್ ಕುಮಾರ್ ನೊಂದಿಗೆ ಜಾಗದ ವಿಚಾರದಲ್ಲಿ ಕಿರಿಕ್ ಮಾಡಿಕೊಂಡಿದ್ದರೆ, ಶಂಕರ್ ಜೊತೆ ಬಾರ್ ವೊಂದರಲ್ಲಿ ಜಗಳ ಮಾಡಿಕೊಂಡಿದ್ದನು.
ಬಂಧಿತ ಐವರು ಆರೋಪಿಗಳೊಂದಿಗೆ ಗಲಾಟೆ ಮಾಡಿಕೊಂಡಿದ್ದ ರೌಡಿಶೀಟರ್ ಕಪಿಲ್ ವಿರುದ್ಧ ಕತ್ತಿ ಮಸೆಯಲು ಹೊಂಚು ಹಾಕುತ್ತಿದ್ದರು. ಇದೇ ಕಪಿಲ್ ವಿರೋಧಿ ಗ್ಯಾಂಗ್ ಸದಸ್ಯರನ್ನು ಒಗ್ಗೂಡಿಸಿಕೊಂಡು ಆರೋಪಿಗಳಿಗೆ ಶಶಿ ಹಣ ಕೊಟ್ಟು ಸುಫಾರಿ ನೀಡಿದ್ದನು ಎಂದು ಪೊಲೀಸ್ ಮೂಲಗಳು ಹೇಳ್ತಿವೆ.
ಇದನ್ನೂ ಓದಿ:ಮೊಹರಂ ಆಚರಣೆ ವೇಳೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ: 8 ಮಂದಿಗೆ ಗಂಭೀರ ಗಾಯ