ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಮೊರೆತ; ದರೋಡೆಕೋರನಿಗೆ ಗುಂಡೇಟು - ETV Bharath Kannada news

ಪೊಲೀಸರು ದರೋಡೆಕೋರನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Etv Bharat
Etv Bharat

By

Published : Jul 11, 2023, 9:33 AM IST

Updated : Jul 11, 2023, 2:06 PM IST

ಪೊಲೀಸರು ದರೋಡೆಕೋರನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಬೆಂಗಳೂರು: ನಗರದಲ್ಲಿ ಇಂದು ಬೆಳಗ್ಗೆ ಗುಂಡಿನ ಸದ್ದು ಕೇಳಿಸಿದೆ. ಸದಾಶಿವನಗರದ ಅರಮನೆ ಬಳಿಯ ನಿರ್ಜನ ಪ್ರದೇಶದಲ್ಲಿ ದರೋಡೆಕೋರ ಯಾಸರ್ (26) ಎಂಬಾತನ ಕಾಲಿಗೆ ಶೇಷಾದ್ರಿಪುರಂ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಸುಲ್ತಾನ್ ಪಾಳ್ಯದ ಭುವನೇಶ್ವರಿ ನಗರದ ನಿವಾಸಿಯಾಗಿರುವ ಈತನ ವಿರುದ್ಧ ಸುಲಿಗೆ, ರಾಬರಿಗಳಂತಹ 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇಂದು ಬೆಳಗ್ಗೆ ಕಾರ್ಯಾಚರಣೆಯಲ್ಲಿ ಪೊಲೀಸರ ಮೇಲೆ ದಾಳಿಗೆ ಮುಂದಾದಾಗ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಶೇಷಾದ್ರಿಪುರಂ ಇನ್ಸ್‌ಪೆಕ್ಟರ್ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

"ಅಶೋಕ ನಗರ, ವೈಯಾಲಿಕಾವಲ್, ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಸಾರ್ವಜನಿಕರಿಗೆ ಚಾಕು ತೋರಿಸಿ ಮೊಬೈಲ್ ಫೋನ್, ಹಣ ದೋಚುತ್ತಿದ್ದರು. ಹೆಚ್ಚಾಗಿ ಬೆಳಗ್ಗಿನ ಜಾವ ಮೂರರಿಂದ ಆರರವೆಗೂ ಅಲರ್ಟ್ ಆಗಿ ಕೃತ್ಯ ಎಸಗುತ್ತಿದ್ದ ಆರೋಪಿಗಳ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಇಂದು ಬೆಳಿಗ್ಗೆ ಸದಾಶಿವನಗರ ಅರಮನೆ ಬಳಿ ಆರೋಪಿಯನ್ನ ವಶಕ್ಕೆ ಪಡೆಯಲು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಆರೋಪಿ ಹಲ್ಲೆಗೆ ಮುಂದಾದಾಗ ಶೇಷಾದ್ರಿಪುರಂ ಠಾಣಾ ಇನ್ಸ್‌ಪೆಕ್ಟರ್ ಆತನ ಬಲಗಾಲಿಗೆ ಗುಂಡು ಹಾರಿಸುವ ಮೂಲಕ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ‌. ಆರೋಪಿಯೊಂದಿಗಿದ್ದ ಆತನ ಸಹಚರನನ್ನು ಸಹ ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಆರು ಮೊಬೈಲ್ ಫೋನ್‌ಗಳನ್ನ ಜಪ್ತಿ ಮಾಡಲಾಗಿದೆ. ಈ ಮುಂಚೆಯೂ ಸಹ ಆರೋಪಿಯು ದ್ವಿಚಕ್ರ ವಾಹನ ಕಳುವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ತನಿಖೆ ನಡೆಸಲಾಗುತ್ತಿದೆ" ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.

ಇದನ್ನೂ ಓದಿ:ATM Robbery: ರಾಜಸ್ಥಾನದ ಜನನಿಬಿಡ ಪ್ರದೇಶದಲ್ಲಿ ಎಟಿಎಂ ದೋಚಿದ ಕಳ್ಳರು, ಅಚ್ಚರಿ ಜೊತೆಗೆ ಆತಂಕ!

ನಗರದಲ್ಲಿ ದಿನೇ ದಿನೇ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಹಣ ಕೇಳುವ ನೆಪದಲ್ಲಿ ವೃದ್ಧನ ಮೊಬೈಲ್ ಫೋನ್, ವ್ಯಾಲೆಟ್ ದೋಚಿದ್ದ ಮಂಗಳಮುಖಿಯರ ಸಹಿತ ನಾಲ್ವರು ಆರೋಪಿಗಳನ್ನು ಕೊಡಿಗೆಹಳ್ಳಿ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತರನ್ನು ಸ್ನೇಹಾ, ಅವಿಷ್ಕಾ, ದೀಪಿಕಾ ಹಾಗೂ ಪ್ರಕಾಶ್ ಎಂದು ಗುರುತಿಸಲಾಗಿದೆ.

ಆರೋಪಿಗಳು ರಸ್ತೆಯಲ್ಲಿ ಒಂಟಿಯಾಗಿ ಸಿಗುತ್ತಿದ್ದವರನ್ನು ಗುರಿಯಾಗಿಸಿ‌ ಹಣ ಕೇಳುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದರು. ಕಳೆದ ಭಾನುವಾರ ಇದೇ ರೀತಿ ಏರ್‌ಪೋರ್ಟ್‌ಗೆ ತೆರಳಲು ಹೆಬ್ಬಾಳ ಫ್ಲೈಓವರ್ ಬಳಿ ಕಾದು‌ ನಿಂತಿದ್ದ 70 ವರ್ಷದ ವೃದ್ಧನ ಬಳಿ ಮಂಗಳಮುಖಿಯರು ಹಣ ಕೇಳಿದ್ದಾರೆ. ಹಣ ನೀಡಿದಾಗ, ಇಷ್ಟು ಹಣ ಸಾಕಾಗದು ಎಂದು ಆತನ ಬಳಿಯಿದ್ದ ಮೊಬೈಲ್ ಫೋನ್, ವ್ಯಾಲೆಟ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಕೈಗೊಂಡು ರೆಡ್ ಹ್ಯಾಂಡ್ ಆಗಿ ಸುಲಿಗೆಕೋರರ ಗುಂಪನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಹಣ ಕೊಟ್ಟರೂ ವೃದ್ಧನ ವ್ಯಾಲೆಟ್​, ಮೊಬೈಲ್​ ದೋಚಿದ ಮೂವರು ಮಂಗಳಮುಖಿಯರು ಸೇರಿ ನಾಲ್ವರ ಬಂಧನ

Last Updated : Jul 11, 2023, 2:06 PM IST

ABOUT THE AUTHOR

...view details