ಬೆಂಗಳೂರು :ಆಹಾರೋತ್ಪನ್ನಗಳ ವ್ಯಾಪಾರ ಪರವಾನಗಿ ಪರಿಶೀಲನೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆಹಾರ ನಿರೀಕ್ಷಕ (ಫುಡ್ ಇನ್ಸ್‌ಪೆಕ್ಟರ್)ನನ್ನು ವಶಕ್ಕೆ ಬಂಧಿಸಿದ್ದಾರೆ. ಒಂದು ಲಕ್ಷ ರೂಪಾಯಿಗೆ ಲಂಚಕ್ಕೆ ಬೇಡಿಕೆಯಿಟ್ಟು 43 ಸಾವಿರ ರೂಪಾಯಿ ಸ್ವೀಕರಿಸುತ್ತಿದ್ದಾಗ ಫುಡ್ ಇನ್ಸ್‌ಪೆಕ್ಟರ್ ಮಹಾಂತೇಗೌಡ ಬಿ ಕಡಬಾಳುನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಆಹಾರೋತ್ಪನ್ನಗಳ ಮಾರಾಟ ಪರವಾನಗಿ ನೀಡಲು ರಂಗಧಾಮಯ್ಯ ಎಂಬುವರಿಂದ ₹ 1 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮಹಾಂತೇಗೌಡ, ಮುಂಗಡವಾಗಿ 10 ಸಾವಿರ ಪಡೆದುಕೊಂಡಿದ್ದ. ಈ ಬಗ್ಗೆ ರಂಗಧಾಮಯ್ಯ ಲೋಕಾಯುಕ್ತದ ಮೊರೆ ಹೋಗಿದ್ದರು. ತಡರಾತ್ರಿ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದ ಲೋಕಾಯುಕ್ತ ಇನ್ಸ್ಪೆಕ್ಟರ್ ಶ್ರೀಕಾಂತ್ ನೇತೃತ್ವದ ತಂಡ 43 ಸಾವಿರ ರೂ. ಲಂಚದ ಹಣ ಸ್ವೀಕರಿಸುತ್ತಿದ್ದ ಮಹಾಂತೇಗೌಡನನ್ನು ವಶಕ್ಕೆ ಪಡೆಯಲು ಮುಂದಾಗಿತ್ತು. ಈ ವೇಳೆ ಲೋಕಾಯುಕ್ತ ಪೊಲೀಸರ ತಂಡವನ್ನು ಕಂಡ ಮಹಾಂತೇಗೌಡ ಅಧಿಕಾರಿಗಳ ಮೇಲೆ ಕಾರು ನುಗ್ಗಿಸಲು ಯತ್ನಿಸಿದ್ದಾನೆ.