ಕರ್ನಾಟಕ

karnataka

ETV Bharat / state

Bengaluru crime: ಬಾಡಿಗೆ ಮನೆ ಮಾಲೀಕರ ಚಿನ್ನಾಭರಣ ದೋಚಿದ ಲಿವಿಂಗ್ ಟುಗೆದರ್ ಜೋಡಿ ಅಂದರ್​ - ಸುಬ್ರಮಣ್ಯಪುರ ಠಾಣೆ

ಬಾಡಿಗೆ ಮನೆ ನೀಡಿದ್ದ ಮಾಲೀಕರ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಲಿವಿಂಗ್ ಟುಗೆದರ್ ಜೋಡಿಯನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

arrest
ಲಿವಿಂಗ್ ಟುಗೆದರ್ ಜೋಡಿ

By

Published : Jun 30, 2023, 1:02 PM IST

ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಬಾಡಿಗೆಗೆ ಮನೆ ಕೊಡುವ ಮಾಲೀಕರೇ ಕೊಂಚ ಎಚ್ಚರ...! ನಿಮ್ಮ ಮನೆ ಬಾಡಿಗೆಗೆ ಕೊಡುವ ಮುನ್ನ ಸ್ವಲ್ಪ ಯೋಚಿಸಿ, ಇಲ್ಲವಾದ್ರೆ ನಿಮ್ಮ ಬೆಲೆ ಬಾಳುವ ಸಂಪತ್ತನ್ನು ಗುಡಿಸಿ ಗಂಡಾಂತರ ಮಾಡೋದು ಪಕ್ಕಾ. ಇದೀಗ, ಲಿವಿಂಗ್ ಟುಗೆದರ್​ನಲ್ಲಿದ್ದ ಖತರ್ನಾಕ್ ಜೋಡಿಯೊಂದು ಮಾಲೀಕರ ಮನೆ ದೋಚಿರುವ ಘಟನೆ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇಸ್​ಗೆ ಸಂಬಂಧಪಟ್ಟಂತೆ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಲಿಖಿತಾ ಹಾಗೂ ಸುಮಂತ್ ಎಂಬುವರನ್ನು ಬಂಧಿಸಿದ್ದಾರೆ.

ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್​ನಲ್ಲಿರುವ ಪ್ರೇಮಲತಾ ಎಂಬುವರು ನಾಲ್ಕು ತಿಂಗಳ ಹಿಂದೆ ಈ ಯುವ ಜೋಡಿಗೆ ತಮ್ಮ ಮನೆ ಬಾಡಿಗೆ ನೀಡಿದ್ದರು. ಮನೆಯನ್ನ ದೋಚಲೆಂದೇ ವ್ಯವಸ್ಥಿತ ಸಂಚು ರೂಪಿಸಿಕೊಂಡು ಬಂದಿದ್ದ ಈ ಜೋಡಿ, ನಾಲ್ಕೂವರೆ ತಿಂಗಳಿಂದ ಮನೆ ಮಾಲೀಕರ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ನಂತರ, ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿದ್ದರು. ಕೆಲ ದಿನದ ಬಳಿಕ ಪ್ರೇಮಲತಾ ಮನೆಯಲ್ಲಿ 4 ಲಕ್ಷದ ಚಿನ್ನಾಭರಣ ದೋಚಿದ್ದಾರೆ. ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ :ಕಳ್ಳತನ ಮಾಡಲು ಬಂದು ಸಿಕ್ಕಿ ಬಿದ್ದ ಕಳ್ಳ: ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಪ್ರೇಮಲತಾ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯಪುರ ಪೊಲೀಸರು, ಕದ್ದ ಚಿನ್ನವನ್ನು ಮಾರಿ ಶಿವಮೊಗ್ಗದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು ಮತ್ತೊಂದು ಅಪರಾಧ ಕೃತ್ಯವೆಸಗಲು ಸಂಚು ರೂಪಿಸಿಕೊಂಡಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ :ಹಾಸನ : ಮನೆಗಳಿಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ ಖದೀಮನ ಸೆರೆ

ಅಂತಾರಾಜ್ಯ ಕಳ್ಳನ ಬಂಧನ : ಚಿನ್ನದ ಅಂಗಡಿ ಮಾಲೀಕರನ್ನು ಗುರಿಯಾಗಿಸಿಕೊಂಡು ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಬೆಳಗಾವಿ ಪೊಲೀಸರು ಜೂನ್​ 28 ರಂದು ಬಂಧಿಸಿದ್ದರು. ಬಂಧಿತನನ್ನು ಮಧ್ಯಪ್ರದೇಶದ ಧಾರಾ ಜಿಲ್ಲೆಯ ವಿಕ್ರಮ ಚವ್ಹಾಣ್​ ಎಂದು ಗುರುತಿಸಲಾಗಿದೆ. ಈತನ ಬಳಿ 51 ಲಕ್ಷ ರೂಪಾಯಿ ಮೌಲ್ಯದ 925 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದ್ದು, ಉಳಿದ ಇಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದರು.

ಇದನ್ನೂ ಓದಿ :Mangaluru Crime : ಸರ, ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಪೊಲೀಸ್ ಬಲೆಗೆ.. 14 ಲಕ್ಷ ಮೌಲ್ಯದ ಚಿನ್ನ, ಬೈಕ್ ವಶ

ಕಳೆದ ಫೆಬ್ರವರಿ 4 ರಂದು ಹುಬ್ಬಳ್ಳಿ ಮೂಲದ ವ್ಯಾಪಾರಿಯಾದ ಕರಣ್​ ಸಿಂಗ್ ರಜಪೂತ್​ ಚಿನ್ನಾಭರಣಗಳನ್ನು ಖರೀದಿಸಿ ಮುಂಬೈನಿಂದ ಹುಬ್ಬಳ್ಳಿಗೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಮೀಪ ಟಿ ಕುಡಿಯಲು ಬಸ್​ ನಿಲ್ಲಿಸಲಾಗಿತ್ತು. ಕರಣ್​ ಸಿಂಗ್​ ಚಹಾ ಕುಡಿಯಲು ಬಸ್ಸಿನಿಂದ ಇಳಿದಿದ್ದಾಗ ಕಳ್ಳರು 925 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್​ ಎಗರಿಸಿದ್ದರು.

ಇದನ್ನೂ ಓದಿ :ಬೆಳಗಾವಿ : ಚಿನ್ನಾಭರಣ ಕದಿಯುತ್ತಿದ್ದ ಅಂತಾರಾಜ್ಯ ಕಳ್ಳನ ಬಂಧನ

ABOUT THE AUTHOR

...view details