ಬೆಂಗಳೂರು: ಸ್ನೇಹಿತನಿಗೆ ಸಾಲ ಕೊಟ್ಟ ತಪ್ಪಿಗೆ ಪ್ರಭಾಕರ್ ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಸ್ನೇಹಿತನೆಂದು ನಂಬಿ ಸಾಲ ಕೊಟ್ಟ: ಹಣ ವಾಪಸ್ ಕೇಳಿದ್ದಕ್ಕೆ ಆಸ್ಪತ್ರೆ ಸೇರಿದ..! - ಕ್ರೈಂ ಸುದ್ದಿ
ಸ್ನೇಹಿತನ ಕಷ್ಟಕ್ಕೆ ಸ್ಪಂದಿಸಿ ಹಣ ನೀಡಿದ್ದ ಪ್ರಭಾಕರ್ ಎಂಬಾತ ಗೆಳೆಯನಿಂದಲೇ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ವೈಯ್ಯಾಲಿಕಾವಲ್ ನಿವಾಸಿಯಾಗಿರುವ ಪ್ರಭಾಕರ್ ವೃತ್ತಿಯಲ್ಲಿ ಆಟೋ ಡ್ರೈವರ್. ಪ್ರಭಾಕರ್ ಮತ್ತು ಶ್ರೀಧರ್ ಆಟೋ ಚಾಲಕರಾದ ಕಾರಣ ಇಬ್ಬರಲ್ಲೂ ಒಳ್ಳೆಯ ಗೆಳತನವಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಶ್ರೀಧರ್ ನನಗೆ ಕಷ್ಟವಿದೆ ಎಂದು ಹೇಳಿ ಪ್ರಭಾಕರ್ ಬಳಿ 80 ಸಾವಿರ ಹಣವನ್ನು ಸಾಲವಾಗಿ ಪಡೆದಿದ್ದ. ಆದರೆ ಕೆಲ ದಿನಗಳ ಬಳಿಕ ಪ್ರಭಾಕರ್, ಶ್ರೀಧರ್ ಬಳಿ ಆಗಾಗ್ಗೆ ಹಣ ಕೊಡು ನನಗೂ ಕಷ್ಟವಿದೆ ಎಂದು ಕೇಳಿದ್ದಾನೆ. ಇದರಿಂದ ಕೋಪಗೊಂಡಿದ್ದ ಶ್ರೀಧರ್ ಮನೆ ಬಳಿ ಬಂದು ಹಣ ಕೊಡುತ್ತೇನೆ ಎಂದಿದ್ದಾನೆ.
ನಂತರ ಪ್ರಭಾಕರ್ ಬಳಿ ಬಂದು ಹಣವನ್ನ ನಾನು ಇನ್ನೊಬ್ಬ ಸ್ನೇಹಿತನ ಬಳಿ ಕೊಡಿಸುತ್ತೇನೆ ನನ್ನ ಜೊತೆ ಬಾ ಎಂದು ಹೇಳಿದ್ದಾನೆ. ಈ ವೇಳೆ ಶ್ರೀಧರ್ ಪ್ರಭಾಕರ್ನನ್ನು ಖಾಲಿ ಕೋಣೆ ಒಳಗೆ ಕೂಡಿ ಹಾಕಿ ಮನಬಂದಂತೆ ಥಳಿಸಿದ್ದಾನೆ. ಅಲ್ಲದೆ ಸ್ಥಳದಲ್ಲೇ ಇದ್ದ ತಂತಿ ತೆಗೆದುಕೊಂಡು ಕುತ್ತಿಗೆ ಭಾಗವನ್ನ ಕಟ್ ಮಾಡಿ ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಭಾಕರ್ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಶ್ರೀಧರ್ಗೆ ಪೊಲೀಸರು ಬಲೆ ಬೀಸಿದ್ದಾರೆ.