ಕರ್ನಾಟಕ

karnataka

ETV Bharat / state

2022ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಬೆಂಗಳೂರಲ್ಲಿ ಇಳಿಮುಖ: ನಗರ ಪೊಲೀಸ್​ ಆಯುಕ್ತ ಪ್ರತಾಪ್ ರೆಡ್ಡಿ - ಸೈಬರ್ ಅಪರಾಧ ಪ್ರಕರಣ

ಬೆಂಗಳೂರಲ್ಲಿ ಕ್ರೈಮ್​ ಪ್ರಕರಣಗಳು ಇಳಿಮುಖ- ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2022ರಲ್ಲಿ ಒಟ್ಟು 9281 ಪ್ರಕರಣಗಳು ದಾಖಲು- ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ

Bangalore Police Commissioner Pratap Reddy spoke.
ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿದರು.

By

Published : Jan 4, 2023, 6:39 PM IST

Updated : Jan 4, 2023, 11:12 PM IST

ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿದರು.

ಬೆಂಗಳೂರು: ನಗರದಲ್ಲಿ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಡಕಾಯತಿ ಸುಲಿಗೆ ಸರ ಅಪಹರಣ ಮನೆ ಕನ್ನ ಕಳುವು ಪ್ರಕರಣಗಳ ಸಂಖ್ಯೆ ಬಹಳಷ್ಟು ಇಳಿಮುಖವಾಗಿದೆ. ನಗರದಲ್ಲಿ ಕಳೆದ ವರ್ಷ ದಾಖಲಾದ ಅಪರಾಧ ಪ್ರಕರಣಗಳ ಅಂಕಿ ಅಂಶ ಬಿಡುಗಡೆಗೊಳಿಸಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಗರದ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು, 2022ರಲ್ಲಿ ಒಟ್ಟು 9281 ಪ್ರಕರಣಗಳು ದಾಖಲಾಗಿದ್ದು, 2728 ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ತಿಳಿಸಿದ್ದಾರೆ.

2019ರಲ್ಲಿ ಬೆಂಗಳೂರಿನಲ್ಲಿ 9962 ಪ್ರಕರಣಗಳು ದಾಖಲಾಗಿದ್ದು 4123 ಪ್ರಕರಣಗಳನ್ನು ಪೊಲೀಸ್ ಸಿಬ್ಬಂದಿವರ್ಗ ಭೇದಿಸಿದ್ದರು. 2020ರಲ್ಲಿ 6980 ಪ್ರಕರಣಗಳು ದಾಖಲಾಗಿದ್ದವು. 3149 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದರು. 2021ರಲ್ಲಿ 7574 ಪ್ರಕರಣಗಳು ದಾಖಲಾಗಿದ್ದು, 3580 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದರು. 2022ರಲ್ಲಿ 9281 ಪ್ರಕರಣಗಳು ದಾಖಲಾಗಿದ್ದು ಆ ಪೈಕಿ 2728 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 2020 - 21ನೇ ಸಾಲಿನಲ್ಲಿ ಕೋವಿಡ್ 19 ಕಾರಣದಿಂದ ಲಾಕ್ ಡೌನ್, ರಾತ್ರಿ ಸಂಚಾರ ನಿಷೇಧ ಇರುವದರಿಂದ ಪ್ರಕರಣಗಳ ಸಂಖ್ಯೆ ಕಡಿಮೆ ವರದಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಗಮನಿಸಿದಾಗ ಕಳೆದ ವರ್ಷ ದಾಖಲಾದ ಪ್ರಕರಣಗಳ ಸಂಖ್ಯೆಗಳಲ್ಲಿ ಇಳಿಮುಖವಾಗಿದೆ. 2020ರಲ್ಲಿ 31 ಪ್ರಕರಣ, 2021ರಲ್ಲಿ 36 ಡಕಾಯಿತಿ ಪ್ರಕರಣಗಳು ದಾಖಲಾದರೆ 2022ರಲ್ಲಿ 23 ಪ್ರಕರಣಗಳು ದಾಖಲಾಗಿವೆ‌.

2020ರಲ್ಲಿ 152 ಹಾಗೂ 2021ರಲ್ಲಿ 166 ಸರಗಳ್ಳತನ ಪ್ರಕರಣದ ದೂರು ದಾಖಲಾಗಿದ್ದರೆ, 2022ರಲ್ಲಿ 151 ಪ್ರಕರಣ ದಾಖಲಾಗಿವೆ. ಅದೇ ರೀತಿ 2020ರಲ್ಲಿ 177 ಕೊಲೆ ಪ್ರಕರಣ ದಾಖಲಾದರೆ 2021ರಲ್ಲಿ 154 ಕೊಲೆ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 172 ಕೊಲೆ ಪ್ರಕರಣ ದಾಖಲಾಗಿವೆ. 2022ರಲ್ಲಿ ನಗರದಲ್ಲಿ 579 ಮಾದಕ ಪದಾರ್ಥ ಸರಬರಾಜುಗಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು 3448 ವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಇಬ್ಬರು ಮಾದಕ ವಸ್ತು ಸರಬರಾಜುಗಾರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಜರುಗಿಸಲಾಗಿದೆ ಎಂದು ಪ್ರತಾಪ್​ ರೆಡ್ಡಿ ತಿಳಿಸಿದರು.

2022ರಲ್ಲಿ 8773 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು ಆ ಪೈಕಿ 7734 ಪ್ರಕರಣಗಳನ್ನು ಪೂರ್ಣಗೊಳಿಸಿ 13.06 ಕೋಟಿ ಹಣವನ್ನು ವಂಚಕರ ಕೈ ಸೇರದಂತೆ ತಡೆಹಿಡಿಯಲಾಗಿದೆ. ಅನಧಿಕೃತವಾಗಿ ನೆಲೆಸಿದ್ದ 600 ವಿದೇಶಿಗರ ಪೈಕಿ 34 ಜನರನ್ನು ಪತ್ತೆಹಚ್ಚಿ ಅವರವರ ದೇಶಕ್ಕೆ ಕಳಿಸಲಾಗಿದೆ. 50 ವಿದೇಶಿ ಜನರನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗಿದ್ದು ಶೀಘ್ರದಲ್ಲೇ ವಾಪಸ್​ ಕಳಿಸಲಾಗುವುದು ಎಂದು ಪೊಲೀಸ್​ ಕಮಿಷನರ್ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದರು.

ಬೆಂಗಳೂರಿಗೆ ತಪ್ಪಿದ ಟ್ರಾಫಿಕ್ ಕಿರಿಕಿರಿ: ಮಹಾನಗರ ಬೆಂಗಳೂರಿನಲ್ಲಿ ಪ್ರಸ್ತುತ ದಿನಗಳಲ್ಲಿ ಸಂಚಾರ ದಟ್ಟಣೆ ಹತೋಟಿಗೆ ಬಂದಿದ್ದು ಟ್ರಾಫಿಕ್ ಸಿಟಿ ಎಂದು ಅಂಟಿಕೊಂಡಿದ್ದ ಹಣೆಪಟ್ಟಿ ಕಳಚಿದೆ. ಅದರಲ್ಲಿಯೂ ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗಕ್ಕೆ ವಿಶೇಷ ಆಯುಕ್ತರು ನೇಮಕಗೊಂಡ ಬಳಿಕ ನಗರದ ಸಂಚಾರ ವ್ಯವಸ್ಥೆಯ ಚಿತ್ರಣ ಬದಲಾಗಿದೆ. ಹೀಗಾಗಿ ಸಂಚಾರಿ ಪೊಲೀಸರ ಕಾರ್ಯಕ್ಕೆ ಬೆಂಗಳೂರಿನ ಜನರು ಇತ್ತೀಚೆಗೆ ಇಲಾಖೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸ್ಪೆಷಲ್ ಕಮಿಷನರ್ ಆದೇಶದಂತೆ ನಗರದಲ್ಲಿ ದಿನದ ಸಮಯದಲ್ಲಿ ಭಾರಿ ವಾಹನಗಳ ಓಡಾಟ ನಿರ್ಬಂಧವಾದ ಬಳಿಕ ಇತರ ವಾಹನ ಸವಾರರು ರಸ್ತೆಯಲ್ಲಿ ಟ್ರಾಫಿಕ್ ಜಂಜಾಟವಿಲ್ಲದೇ ಸಂಚರಿಸುತ್ತಿದ್ದಾರೆ. ವಾಹನ ಸವಾರರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಲ್ಲಿ ಸಂಚರಿಸಲು ವಾರಾಂತ್ಯ ನೆನಪಾಗುತ್ತಿದೆ. ಅಂತ ಜನರು ಸಂಚಾರ ಪೊಲೀಸರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.

ಭಾರಿ ವಾಹನಗಳ ಸಂಚಾರ ನಿರ್ಬಂಧ ನಿಯಮ ಜಾರಿಗೊಳಿಸಿದ ಬಳಿಕ ಕೆ.ಆರ್ ಮಾರ್ಕೆಟ್ ನಂತ‌ಹ ನಗರದ ಹೃದಯ ಭಾಗದದಲ್ಲಿಯೂ ಸಂಚಾರ ದಟ್ಟಣೆ ಹತೋಟಿಗೆ ಬಂದಿದೆ.

ಇದನ್ನೂಓದಿ:ಐವರು ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ಶಿಫಾರಸು: ಮಾನವ ಹಕ್ಕು ಆಯೋಗ ಆದೇಶ

Last Updated : Jan 4, 2023, 11:12 PM IST

ABOUT THE AUTHOR

...view details