ಬೆಂಗಳೂರು:ಪ್ರೇಮ ವೈಫಲ್ಯಕ್ಕೆ ಬೇಸತ್ತು ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ಸಂಜೆ ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯ ಜೆ ಎಸ್ ನಗರದಲ್ಲಿ ನಡೆದಿದೆ. ನವೀನ್ (27) ಆತ್ಮಹತ್ಯೆಗೆ ಶರಣಾದ ಯುವಕ. ಚಾಮರಾಜನಗರ ಜಿಲ್ಲೆಯ ಚಿಕ್ಕಲೂರು ಮೂಲದ ನವೀನ್ ಕುಟುಂಬದವರೊಂದಿಗೆ ಬೆಂಗಳೂರಲ್ಲಿ ವಾಸವಿದ್ದ. ಬಾಳೆಕಾಯಿ ಮಂಡಿ ಇಟ್ಟುಕೊಂಡು ವ್ಯವಹಾರ ಮಾಡುತ್ತಿದ್ದ.
ಯುವತಿಯೊಬ್ಬಳನ್ನು ನವೀನ್ ಪ್ರೀತಿಸುತ್ತಿದ್ದು, ಆಕೆ ಪ್ರೀತಿ ನಿರಾಕರಿಸಿದ ಕಾರಣ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮ್ ವೈಫಲ್ಯದ ಬಗ್ಗೆ ಡೆತ್ ನೋಟ್ನಲ್ಲಿ ನವೀನ್ ಬರೆದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರಾಣ ಕಳೆದುಕೊಂಡಿದ್ದಾನೆ. ಮೃತ ನವೀನ್ ಕುಟುಂಬಸ್ಥರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಕುಟುಂಬಸ್ಥರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಿಯಕರನಿಗೆ ಇರಿದ ಮಹಿಳೆ:ಪ್ರೇಮ ಸಂಬಂಧದಲ್ಲಿದ್ದರೂ ಇತ್ತೀಚೆಗೆ ಅಂತರ ಕಾಯ್ದುಕೊಳ್ಳುತ್ತಿದ್ದ ಪ್ರಿಯಕರನಿಗೆ ವಿವಾಹಿತ ಮಹಿಳೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಲ್ಲಿ ಭಾನುವಾರ ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ವಿವೇಕ ನಗರ ಪೊಲೀಸರು, ಮಹಿಳೆಯನ್ನು ಬಂಧಿಸಿದ್ದಾರೆ. ಯುವಕ ಜೋಗೇಶ್ ಮತ್ತು ಮಹಿಳೆ ಅಸ್ಸೋಂ ಮೂಲದವರಾಗಿದ್ದು, ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು. ಗಂಡನನ್ನು ಬಿಟ್ಟು ಮಹಿಳೆ ದೂರವಾದ ಬಳಿಕ ಯುವಕ ಜೋಗೇಶ್ ಜೊತೆ ಪ್ರೀತಿಯಲ್ಲಿದ್ದಳು. ಆದ್ರೆ ಇತ್ತೀಚೆಗೆ ಪ್ರೇಯಸಿಯಿಂದ ಜೋಗೇಶ್ ದೂರವಾಗಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಮಹಿಳೆ, ಚಾಕುವಿನಿಂದ ಇರಿದಿದ್ದಳು. ತೀವ್ರವಾಗಿ ಗಾಯಗೊಂಡ ಜೋಗೇಶ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.