ಬೆಂಗಳೂರು: ಬಿರು ಬೇಸಿಗೆಯ ಬಿಡುವಿನ ವೇಳೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ಜೀವನೋತ್ಸಾಹ ತುಂಬುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪ್ರಾಯೋಜಕತ್ವದಲ್ಲಿ ದೇಶದ 14 ರಾಜ್ಯಗಳಲ್ಲಿನ ಕೇಂದ್ರ ಕಾರಾಗೃಹಗಳಲ್ಲಿ ವಾಲಿಬಾಲ್, ಬ್ಯಾಡ್ಮಿಂಟನ್, ಕೇರಮ್, ಚೆಸ್ ಹಾಗೂ ಬಾಸ್ಕೆಟ್ ಬಾಲ್ ಕುರಿತು ತರಬೇತುದಾರರಿಂದ 1 ತಿಂಗಳ ತರಬೇತಿ ನೀಡಲಾಗುತ್ತಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕ್ರೀಡೆಗಳ ಕಲರವ - ಕೇಂದ್ರ ಕಾರಾಗೃಹದಲ್ಲಿ ಕ್ರಿಕೆಟ್ ಆಯೋಜನೆ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿನ್ನೆ ಕ್ರೀಡೆಗಳ ಕಲರವ ಜೋರಾಗಿತ್ತು. ಕಾರಾಗೃಹದ ಕೈದಿಗಳ ನಡುವೆ ಸೌಹಾರ್ದ ಕ್ರಿಕೆಟ್, ಕೇರಮ್ ಪಂದ್ಯ ಆಯೋಜಿಸಲಾಗಿತ್ತು. ಜೊತೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪ್ರಾಯೋಜಕತ್ವದಲ್ಲಿ ವಾಲಿಬಾಲ್, ಬ್ಯಾಡ್ಮಿಂಟನ್, ಕೇರಮ್, ಚೆಸ್ ಹಾಗೂ ಬಾಸ್ಕೆಟ್ ಬಾಲ್ ಕುರಿತು ತರಬೇತುದಾರರಿಂದ 1 ತಿಂಗಳ ತರಬೇತಿಯನ್ನು ನೀಡಲಾಗುತ್ತಿದೆ.

ಪರಪ್ಪನ ಅಗ್ರಹಾರದಲ್ಲಿ ಕ್ರೀಡೆ ಆಯೋಜನೆ
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಮಾನ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕಾರಾಗೃಹಗಳ ಮಹಾ ನಿರೀಕ್ಷಕ ಅಲೋಕ್ ಮೋಹನ್ ಅವರು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅಧ್ಯಕ್ಷರ ಉಪಸ್ಥಿತಿಯಲ್ಲಿ "Prison To Pride" ಎಂಬ ಧ್ಯೇಯವಾಕ್ಯದೊಂದಿಗೆ ನಿನ್ನೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಕಾರಾಗೃಹದ ಸಿಬ್ಬಂದಿ ಹಾಗೂ ಕೈದಿಗಳ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯ, ಕೇರಮ್, ಬ್ಯಾಡ್ಮಿಂಟನ್ ಆಯೋಜಿಸಲಾಗಿತ್ತು.
ಪರಪ್ಪನ ಅಗ್ರಹಾರದಲ್ಲಿ ಕ್ರೀಡೆ ಆಯೋಜನೆ
ಇದನ್ನೂ ಓದಿ:ಮದ್ಯದಿಂದಲೇ ಅಭಿಷೇಕ, ಸಿಗರೇಟ್ ಆರತಿ: ಕಾರವಾರದಲ್ಲೊಂದು ವಿಶಿಷ್ಟ ದೇವರು