ಕ್ರಿಕೆಟ್ ನೋಡಲು ಎಷ್ಟು ಮಜವೂ ಅಷ್ಟೇ ಮಜ ಕಮೆಂಟರಿ ಕೇಳುವುದರಲ್ಲಿ ಇರುತ್ತದೆ. ಆಟಗಾರರ ಚಲನ ವಲನ ಅವನ ಸನ್ನೆಗಳನ್ನು ಆಟದ ಅನುಭವ ಇರುವ ವೀಕ್ಷಕ ವಿವರಣೆಗಾರರು ವಿಶ್ಲೇಷಿಸುವ ರೀತಿ ಬಹಳಾ ಜನ ಇಷ್ಟ ಪಡುತ್ತಾರೆ. 2011ರ ವಿಶ್ವ ಕಪ್ನ ಕೊನೆಯ ಬಾಲ್ಗೆ ಧೋನಿ ಸಿಕ್ಸ್ ಹೊಡೆದಾಗ ಮಾಜಿ ಕ್ರಿಕೆಟಿಗ, ಭಾರತ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ರವಿಶಾಸ್ತ್ರಿ ಅವರ ಇಂಗ್ಲಿಷ್ ಕಮೆಂಟರಿ ಇಂದಿಗೂ ಕ್ರಿಕೆಟ್ ಅಭಿನಮಾನಿಗಳ ಕಿವಿಯಲ್ಲಿ ಗುನಗುಡುತ್ತಿರುತ್ತದೆ.
ಹರ್ಷ ಭೋಗ್ಲೆ, ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಸಂಜಯ್ ಮಾಂಜ್ರೇಕರ್ ಮತ್ತು ಆಕಾಶ್ ಚೋಪ್ರಾ ಅವರ ಕಮೆಂಟರಿ ಧ್ವನಿಗಳು ಇಂದಿಗೂ ಕ್ರಿಕೆಟ್ ಪ್ರಿಯರಿಗೆ ನೆನಪಿರುತ್ತದೆ. ಇತ್ತಿಚಿಗೆ ಕ್ರಿಕೆಟ್ ಕಮೆಂಟರಿ ಎಲ್ಲಾ ಭಾಷೆಗಳಲ್ಲೂ ಸಿಗುತ್ತಿದೆ. ಹಿಂದೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಸಿಗುತ್ತಿತ್ತು.