ಬೆಂಗಳೂರು: ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದನೇ ಅಲೆಯಲ್ಲೂ ಎಲ್ಲಾ ಆಸ್ಪತ್ರೆಗಳಲ್ಲೂ ಬೆಡ್ ಫುಲ್ ಆಗಿತ್ತು. ಈಗಲೂ ಅದೇ ರೀತಿ ಎಲ್ಲಾ ಆಸ್ಪತ್ರೆಗಳಲ್ಲೂ ಬೆಡ್ ಫುಲ್ ಆಗಿದೆ. ಈಗ ಬೆಡ್ ಯಾವುದೇ ರೀತಿಯಲ್ಲೂ ಹೆಚ್ಚಾಗಿಲ್ಲ. ಅದೇ ಬೆಡ್ ವ್ಯವಸ್ಥೆ ಇದೆ. ಆದ್ರೆ ಈಗ ಎಲ್ಲಿಂದ ಆಕ್ಸಿಜನ್ ಶಾರ್ಟೆಜ್ ಆಯ್ತು? ಯಾರೋ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.
ಈ ಕೂಡಲೇ ಅಧಿಕಾರಗಳು ಕ್ರಮ ಕೈಗೊಳ್ಳಬೇಕು. ಎಲ್ಲೋ ಗೊಂದಲ ಮಾಡಬೇಕು ಅಂತ ಈ ರೀತಿ ಮಾಡುತ್ತಿದ್ದಾರೆ. ಈಗ ಆಕ್ಸಿಜನ್ ಕೊರತೆ ಇಲ್ಲ. ಇದ್ದಕ್ಕಿದ್ದ ಹಾಗೆ ಶಾರ್ಟೆಜ್ ಹೇಗಾಯ್ತು?. ಸಂಬಂಧಪಟ್ಟ ಡ್ರಗ್ಸ್ ಕಂಟ್ರೋಲರ್ಗಳು ಪಬ್ಲಿಕ್ ಡೋಮೈನ್ನಲ್ಲಿ ಹಾಕಬೇಕು. ಕೂಡಲೇ ಅಧಿಕಾರಿಗಳು ಇದರ ಕಡೆ ಗಮನ ಕೊಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.