ಕರ್ನಾಟಕ

karnataka

ETV Bharat / state

ಹೆಸರಾಂತ ಆಸ್ಪತ್ರೆಗಳ ನಕಲಿ ವೆಬ್‌ಸೈಟ್ ಸೃಷ್ಟಿಸಿ ಜಾಹೀರಾತು:  ಮೂವರು ವಿದೇಶಿಯರ ಬಂಧನ - ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ನೇತೃತ್ವದ ತಂಡದಿಂದ ಆರೋಪಿಗಳ ಬಂಧನ

ಕಿಡ್ನಿ ಕೊಳ್ಳುವವರು ಹಾಗೂ ಮಾರುವವರನ್ನು ಗುರಿಯಾಗಿಸಿಕೊಂಡು ಆಸ್ಪತ್ರೆಗಳ ನಕಲಿ ವೆಬ್‌ಸೈಟ್ ಬಳಸಿ ಮೂತ್ರಪಿಂಡ ದಾನ ಮಾಡಿದರೆ 4 ಕೋಟಿ ರೂ. ನೀಡುವುದಾಗಿ ಜಾಹೀರಾತು ಹಾಕಿ, ವಂಚಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಬೃಹತ್ ವಂಚನೆಯ ಜಾಲ ಪತ್ತೆಯಾಗಿದೆ. ವಿಚಾರಣೆ ವೇಳೆ ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿದಂತೆ ಪ್ರಸಿದ್ಧ ಆಸ್ಪತ್ರೆಗಳ ನಕಲಿ ವೆಬ್ ಸೈಟ್​ಗಳನ್ನು ಸೃಷ್ಟಿಸಿರುವುದಾಗಿ ಆರೋಪಿಗಳು ಹೇಳಿದ್ದಾರೆ.

Arrest of three foreigners who defraud people
ಜನರನ್ನು ವಂಚಿಸುತ್ತಿದ್ದ ಮೂವರು ವಿದೇಶಿಯರ ಬಂಧನ

By

Published : Apr 25, 2022, 3:33 PM IST

ಬೆಂಗಳೂರು:ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್‌ಸೈಟ್ ಬಳಸಿ ಮೂತ್ರಪಿಂಡ ದಾನ ಮಾಡಿದರೆ 4 ಕೋಟಿ ರೂ. ನೀಡುವುದಾಗಿ ಜಾಹೀರಾತು ಹಾಕಿ, ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು ವಿದೇಶಿ ಪ್ರಜೆಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾದ ಮಿನಿ‌ಮಿರಾಕಲ್, ಕೋವಾ ಕೋಲಿಂಚ್ ಹಾಗೂ ಘಾನಾದ ಮ್ಯಾಥ್ಯೂ ಇನ್ನೋಸೆಂಟ್ ಬಂಧಿತ ಆರೋಪಿಗಳು.

ಕಿಡ್ನಿ ಕೊಳ್ಳುವವರು ಹಾಗೂ ಮಾರುವವರನ್ನು ಇವರು ಗುರಿಯಾಗಿಸಿಕೊಳ್ಳುತ್ತಿದ್ದರು. ಈ ಮೂವರು ಇತ್ತೀಚೆಗೆ ಸಾಗರ್ ಅಪೋಲೋ ಆಸ್ಪತ್ರೆಯ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಸಿದ್ದರು. ಕಿಡ್ನಿ ದಾನದ ಮೊದಲು 2 ಕೋಟಿ ಹಾಗೂ ದಾನ ಮಾಡಿದ ಮೇಲೆ 2 ಕೋಟಿ ನೀಡುವುದಾಗಿ ಜಾಹೀರಾತು ನೀಡಿದ್ರು. ಈ ಸಂಬಂಧ ಸಾಗರ್ ಅಪೋಲೋ ಆಸ್ಪತ್ರೆಯ ನಿರ್ದೇಶಕ ಮಹೇಂದ್ರ, ಆಗ್ನೇಯ ವಿಭಾಗದ ಸಿಇಎನ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.

ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣೇಶ್ವರ ರಾವ್ ಮನವಿಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣೇಶ್ವರ ರಾವ್ ಮನವಿ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸಿದ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದೆ. ಅಮೃತಹಳ್ಳಿಯ ಅಪಾರ್ಟ್‌ಮೆಂಟ್​​​ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ವೇಳೆ ಬೃಹತ್ ವಂಚನೆಯ ಜಾಲ ಪತ್ತೆಯಾಗಿದೆ.

ವಿಚಾರಣೆ ವೇಳೆ ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿದಂತೆ ಪ್ರಸಿದ್ಧ ಆಸ್ಪತ್ರೆಗಳ ನಕಲಿ ವೆಬ್ ಸೈಟ್​ಗಳನ್ನು ಸೃಷ್ಟಿಸಿರುವುದಾಗಿ ಆರೋಪಿಗಳು ಹೇಳಿದ್ದಾರೆ. ವಾಟ್ಸ್​ಆ್ಯಪ್​​ ಮುಖಾಂತರ ನೋಂದಣಿ ಹಾಗೂ ವಿವಿಧ ಮಾದರಿಯ ಶುಲ್ಕ ನೆಪದಲ್ಲಿ ಕಿಡ್ನಿಕೊಳ್ಳುವ ಹಾಗೂ ಮಾರುವವರನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದರು.

ಇದನ್ನೂ ಓದಿ: ಪಾಟ್ನಾ ಎನ್​ಇಟಿ ಇಂಜಿನಿಯರಿಂಗ್​ ವಿದ್ಯಾರ್ಥಿಗೆ ಅಮೆಜಾನ್​ನಿಂದ 1.08 ಕೋಟಿ ರೂ. ಆಫರ್​

ಈ ಎಲ್ಲ ಕೆಲಸವನ್ನು ಫೋನ್ ಮುಖಾಂತರವೇ ನಡೆಸುತಿದ್ದ ಆರೋಪಿಗಳು, ಬಲೆಗೆ ಬಿದ್ದವರಿಗೆ ಹಣದ ಆಸೆ ಹುಟ್ಟಿಸಿ ಕೊನೆಗೆ ಬ್ಯಾಂಕ್​​ನಲ್ಲಿ ಹಣ ಡೆಪಾಸಿಟ್ ಆಗಿದೆ. ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಬೇಕು. ಹಣ ಬಂದರೆ ಶೇ.30ರಷ್ಟು ಕಮಿಷನ್ ನೀಡಬೇಕು ಎನ್ನುತ್ತಿದ್ದರಂತೆ. ಕೋಟಿ ಆಸೆಗೆ ಬಿದ್ದು ಹಣ ಕಳೆದುಕೊಂಡವರು ಹಲವರಿದ್ದು, ಈವರೆಗೂ ಯಾರು ದೂರು ನೀಡಿಲ್ಲ. ಹೀಗಾಗಿ ಆರೋಪಿಗಳಿಂದ ವಂಚನೆಗೊಳಗಾದವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವಂತೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣೇಶ್ವರ ರಾವ್ ಮನವಿ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details