ಬೆಂಗಳೂರು:ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಮಗಳು ಗೀತಾಂಜಲಿ ವಿವಾಹವನ್ನು ಅಜಯ್ ಜೊತೆ ಮಾಡಿ, ಕೆಲವು ದಿವಸಗಳ ರೆಸ್ಟ್ ನಂತರ ಚಿತ್ರೀಕರಣಕ್ಕೆ ವಾಪಸ್ ಆಗಿದ್ದಾರೆ. ಆದರೆ, ಕ್ರೇಜಿ ಸ್ಟಾರ್ ಎಂಟ್ರಿ ಕೊಟ್ಟಿರೊದು ಅವರು ಅರ್ಧದಲ್ಲಿ ನಿಲ್ಲಿಸಿರುವ ‘ರಾಜೇಂದ್ರ ಪೊನ್ನಪ್ಪ’ ಸಿನಿಮಾ ಮೂಲಕ ಅಲ್ಲ. ಆದರೆ, ‘ದೃಶ್ಯ 2’ ಎಂದು ತಾತ್ಕಾಲಿಕವಾಗಿ ನಾಮಕರಣ ಮಾಡಿರುವ ಸಿನಿಮಾ ಮೂಲಕ.
ನಿನ್ನೆ ಕೊಡಗಿನ ಶುಂಟಿಕೊಪ್ಪದಲ್ಲಿ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಸಿನಿಮಾ ಸೆಟ್ಟೇರಿದ್ದು. 20 ದಿವಸಗಳ ಕಾಲ ಅಲ್ಲಿಯೇ ಚಿತ್ರೀಕರಣ ಸಹ ಪ್ರಾರಂಭ ಆಗಿದೆ. ಇದು ಬೆಂಗಳೂರು ಮೂವೀಸ್ ಸಿನಿಮಾವಾಗಿದ್ದು, ಅಜಿತ್ ಈ ಚಿತ್ರದ ನಿರ್ದೇಶಕರು, ಮ್ಯಾಥೀವ್ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಸಿನಿಮಾಕ್ಕೆ ಪ್ರೊಡಕ್ಷನ್ ನಂ 3 ಎಂದು ಕರೆಯಲಾಗುತ್ತಿದ್ದು, ಪಿ ಕೆ ಎಚ್ ದಾಸ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಶ್ರೀನಿವಾಸಪ್ರಭು, ಲಿಖಿತ, ಮೋನಿಶ, ಯತಿರಾಜ್, ಡಾ ನಾಗೇಶ್, ಕೃಷ್ಣ ಮೋಹನ್ ಹಾಗೂ ಇತರರು ತಾರಗಣದಲ್ಲಿದ್ದಾರೆ.