ಕರ್ನಾಟಕ

karnataka

ETV Bharat / state

ನಮ್ಮ ಮೆಟ್ರೋ ಹಳಿಯಲ್ಲಿ ಬಿರುಕು; ತ್ವರಿತ ಕಾಮಗಾರಿಯಿಂದ ಆತಂಕ ದೂರ - ಕಬ್ಬಿಣದ ಪಿಲ್ಲರ್​ ಕುಸಿದು ತಾಯಿ ಮಗ ಸಾವನ್ನಪಿದ ಘಟನೆ

ನಮ್ಮ ಮೆಟ್ರೋ ಹಳಿಯಲ್ಲಿ ಬಿರುಕು ಕಂಡು ಬಂದಿದ್ದು, ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್‌ ತ್ವರಿತ ಕಾಮಗಾರಿ ನಡೆಸಿದೆ.

Crack on track in Bengaluru metro rail
ಮೆಟ್ರೋ ಹಳಿಯ ಮೇಲೆ ಕಾಣಿಸಿಕೊಂಡಿದ್ದ ಬಿರುಕು

By

Published : Feb 7, 2023, 3:56 PM IST

ಬೆಂಗಳೂರು:ನಮ್ಮ ಮೆಟ್ರೋ ಹಳಿಯಲ್ಲಿ ಎಲೆಕ್ಟ್ರಿಕ್ ಲೈನ್‌ ಬಿರುಕು ಬಿಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಮೆಜೆಸ್ಟಿಕ್‌-ಕೆಂಗೇರಿ ನೇರಳೆ ಮಾರ್ಗದ ಪಟ್ಟಣಗೆರೆ ಸ್ಟೇಷನ್‌ಗೆ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮೆಟ್ರೋ ಪೈಲೆಟ್ ಹಾಗೂ ಸಿಬ್ಬಂದಿ ಇದನ್ನು ಗಮನಿಸಿದ್ದು ಟ್ರ್ಯಾಕ್ ಸೌಂಡ್, ಸ್ಪೀಡ್​ನಲ್ಲಿ ಬದಲಾವಣೆಯಾಗಿತ್ತು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡು ಟ್ರ್ಯಾಕ್‌ ದುರಸ್ತಿ ಮಾಡಲಾಗಿದೆ. ಕಾಮಗಾರಿ ನಡೆಯುತ್ತಿದ್ದಾಗ ಮತ್ತೊಂದು ಟ್ರ್ಯಾಕ್​ನಲ್ಲಿ ರೈಲು ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ಸರಿಪಡಿಸಿದ ನಂತರ ಎರಡೂ ಹಳಿಯಲ್ಲಿ‌ ಎಂದಿನಂತೆ ಸಂಚಾರ ಮುಂದುವರೆಸಲಾಗಿದೆ. ಸಾರ್ವಜನಿಕರ ಗಮನಕ್ಕೆ ತರದೇ ಬಿಎಂಆರ್‌ಸಿಎಲ್‌ ದುರಸ್ತಿ ಕೆಲಸ ಮಾಡಿ ಮುಗಿಸಿದೆ.

ಇದನ್ನೂ ಓದಿ:ಬೆಂಗಳೂರು ಮೆಟ್ರೊ ಪಿಲ್ಲರ್ ದುರಂತ: ನಮ್ಮ ಮೆಟ್ರೋ ಸಂಸ್ಥೆಗೆ ವರದಿ ಸಲ್ಲಿಸಿದ ಐಐಎಸ್‌ಸಿ

ಪಿಲ್ಲರ್​ ದುರಂತದ ಕಹಿ ನೆನಪು:ಜನವರಿ 10 ರಂದು ಮೆಟ್ರೋ ರೈಲಿನ ನಿರ್ಮಾಣ ಹಂತದ ಕಬ್ಬಿಣದ ಪಿಲ್ಲರ್​ ಕುಸಿದು ತಾಯಿ ಮತ್ತು ಮಗ ಸಾವನ್ನಪ್ಪಿದ್ದರು. ಹೆಣ್ಣೂರು ಕ್ರಾಸ್​ ಸಮೀಪದ ಹೆಚ್‌ಬಿಆರ್​ ಲೇಔಟ್​ ರಿಂಗ್​ ರೋಡ್ ಬಳಿ ತೆರಳುತ್ತಿದ್ದಾಗ ಪಿಲ್ಲರ್​ ಕುಸಿದು ಬಿದ್ದು ಅನಾಹುತ ಜರುಗಿತ್ತು. ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್​ ಕುಸಿತ ಪ್ರಕರಣ ಸಂಬಂಧ 8 ಜನರ ಮೇಲೆ ಕೂಡಲೇ ಎಫ್​ಐಆರ್​ ದಾಖಲಿಸಲಾಗಿತ್ತು. ಪ್ರಭಾರಿ ಉಪ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸೈಟ್ ಇಂಜಿನಿಯರ್​ಗಳನ್ನು ಬಿಎಂಆರ್​ಸಿಎಲ್​ ಅಮಾನತು ಮಾಡಿತ್ತು. ಮೆಟ್ರೋ ರೈಲು ಕಾರ್ಪೋರೇಶನ್​ ಲಿಮಿಟೆಡ್​ (BMRCL) ಪ್ರಕರಣದ ಸ್ವತಂತ್ರ ತನಿಖೆ ಮತ್ತು ವರದಿ ನೀಡಲು ಭಾರತೀಯ ವಿಜ್ಞಾನ ಸಂಸ್ಥೆಗೆ ಮನವಿ ಮಾಡಿತ್ತು.

ಇದನ್ನೂ ಓದಿ:ಮೆಟ್ರೊ ಪಿಲ್ಲರ್​ ಕುಸಿತ ಪ್ರಕರಣ.. ನಾನವನಲ್ಲ, ನಾನವನಲ್ಲ... ಜವಾಬ್ದಾರಿ ಹೊತ್ತಿಕೊಳ್ಳಲು ಯಾರೂ ರೆಡಿಯಿಲ್ಲವಂತೆ!

ABOUT THE AUTHOR

...view details