ಮೈಸೂರು: ಚಾಮುಂಡಿ ಬೆಟ್ಟದ ಪ್ರಸಿದ್ಧ ಏಕಶಿಲಾ ನಂದಿ ವಿಗ್ರಹದಲ್ಲಿ ಸಣ್ಣನೆಯ ಬಿರುಕು ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆತಂಕ ಮೂಡಿದೆ.
ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು, ರಾಸಾಯನಿಕ ಬಳಸಿದ್ದೇ ಕಾರಣ? - undefined
400 ವರ್ಷ ಹಳೆಯ ಪಾರಂಪರಿಕ ಏಕಶಿಲಾ ನಂದಿ ವಿಗ್ರಹದಲ್ಲಿ ಬಿರುಕು ಮೂಡಿದ್ದು, ಭಕ್ತರು ಆತಂಕದಿಂದಿದ್ದಾರೆ. ಆದರೆ, ಇದಕ್ಕೆ ಕಾರಣ ಬೇರೆಯೇ ಇದ್ದು, ಶೀಘ್ರವೆ ಅದನ್ನು ಖಚಿತಪಡಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಏಕಶಿಲಾ ನಂದಿ ವಿಗ್ರಹದಲ್ಲಿ ಬಿರುಕು: ಭಕ್ತರಲ್ಲಿ ಆತಂಕ
ಚಾಮುಂಡಿ ಬೆಟ್ಟದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಏಕಶಿಲಾ ನಂದಿ ವಿಗ್ರಹವು ಸುಮಾರು 400 ವರ್ಷ ಹಳೆಯ ಪಾರಂಪರಿಕ ವಿಗ್ರಹವಾಗಿದೆ. ಸದ್ಯ ಈ ನಂದಿ ವಿಗ್ರಹದ ಕಾಲಿನ ಭಾಗದಲ್ಲಿ ಸಣ್ಣಗೆ ಬಿರುಕು ಕಾಣಿಸಿಕೊಂಡಿದ್ದು, ಇದರಿಂದ ಪ್ರವಾಸಿಗರು ಮತ್ತು ಭಕ್ತರಲ್ಲಿ ಆತಂಕ ಉಂಟಾಗಿದೆ.
ಕಳೆದ ವರ್ಷ, ಕಪ್ಪಗಿದ್ದ ನಂದಿ ವಿಗ್ರಹವನ್ನು ಕೆಮಿಕಲ್ ಬಳಸಿ ಬಿಳಿಯ ಬಣ್ಣದ ರೂಪದಲ್ಲಿ ಬದಲಾವಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬಳಸಿದ ಕೆಮಿಕಲ್, ನಂದಿ ವಿಗ್ರಹ ಬಿರುಕು ಬಿಡಲು ಕಾರಣ ಎನ್ನಲಾಗಿದ್ದು, ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ವರದಿ ಮಾಡುವಂತೆ ಸೂಚಿಸಿದ್ದಾರೆ.
Last Updated : Jun 16, 2019, 11:31 AM IST