ಕರ್ನಾಟಕ

karnataka

ಇಂದಿರಾ ಕ್ಯಾಂಟೀನ್ ಆಹಾರ ಸ್ಥಗಿತಕ್ಕೆ ಸಿಪಿಐ(ಎಂ) ಖಂಡನೆ

By

Published : Apr 5, 2020, 11:19 AM IST

ಲಾಕ್ ಡೌನ್ ಆರಂಭವಾದಾಗ ಪ್ರತಿ ದಿನ ಮೂರು ಹೊತ್ತು ಆಹಾರ ನೀಡುವುದನ್ನು ಆರಂಭಿಸಿ ಒಂದೇ ದಿನದಲ್ಲಿ ನಿಲ್ಲಿಸಿ ತನ್ನ ಆಡಳಿತ ವೈಫಲ್ಯವನ್ನು ಪ್ರದರ್ಶಿಸಿತು. ಆನಂತರ ಟೀಕೆಗಳನ್ನು ಎದುರಿಸಲಾರದೆ ಮತ್ತೆ ಇಂದಿರಾ ಕ್ಯಾಂಟೀನ್ ಗಳ ಬಳಿ ಬಂದವರಿಗೆ ಆಹಾರ ಪೊಟ್ಟಣ ಸರಬರಾಜಿಗೆ ಮುಂದಾಯಿತು ಎಂದು ಬಿಜೆಪಿ ವಿರುದ್ಧ ಸಿಪಿಎಂ ಕಿಡಿಕಾರಿದೆ.

ಇಂದಿರಾ ಕ್ಯಾಂಟೀನ್ ಆಹಾರ ಸ್ಥಗಿತಕ್ಕೆ ಸಿಪಿಐ(ಎಂ) ಖಂಡನೆ
ಇಂದಿರಾ ಕ್ಯಾಂಟೀನ್ ಆಹಾರ ಸ್ಥಗಿತಕ್ಕೆ ಸಿಪಿಐ(ಎಂ) ಖಂಡನೆ

ಬೆಂಗಳೂರು: ರಾಜ್ಯ ಸರ್ಕಾರವು ಇಂದಿರಾ ಕ್ಯಾಂಟೀನ್​ನಲ್ಲಿ ಆಹಾರ ಪೂರೈಕೆ ನಿಲ್ಲಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಖಂಡಿಸಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವು ಜನ ತಮ್ಮ ಜೀವನಾದಾರ ಕಳೆದುಕೊಂಡು ಆಹಾರಕ್ಕಾಗಿ ಪರಿತಪಿಸುತ್ತಿರುವಾಗ ರಾಜ್ಯ ಬಿಜೆಪಿ ಸರ್ಕಾರವು ಸಮಗ್ರ ದೃಷ್ಠಿಕೋನವಿಲ್ಲದೆ ದಿನಕ್ಕೊಂದು ಕ್ರಮವಹಿಸುತ್ತ ಜನತೆಯನ್ನು ವಂಚಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಆಹಾರ ಸ್ಥಗಿತಕ್ಕೆ ಸಿಪಿಐ(ಎಂ) ಖಂಡನೆ

ಲಾಕ್ ಡೌನ್ ಆರಂಭವಾದಾಗ ಪ್ರತಿ ದಿನ ಮೂರು ಹೊತ್ತು ಆಹಾರ ನೀಡುವುದನ್ನು ಆರಂಭಿಸಿ ಒಂದೇ ದಿನದಲ್ಲಿ ನಿಲ್ಲಿಸಿ ತನ್ನ ಆಡಳಿತ ವೈಫಲ್ಯವನ್ನು ಪ್ರದರ್ಶಿಸಿತು. ಆನಂತರ ಟೀಕೆಗಳನ್ನು ಎದುರಿಸಲಾರದೆ ಮತ್ತೆ ಇಂದಿರಾ ಕ್ಯಾಂಟೀನ್ ಗಳ ಬಳಿ ಬಂದವರಿಗೆ ಆಹಾರ ಪೊಟ್ಟಣ ಸರಬರಾಜಿಗೆ ಮುಂದಾಯಿತು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದೆ.

ಸರ್ಕಾರದ ಈ ರೀತಿಯ ದಿನದಿನವು ಬದಲಾಗುತ್ತಿರುವ ಧೋರಣೆಯಿಂದ ಬಡ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೆ ದಿನಕ್ಕೆ ಮೂರು ಹೊತ್ತು ಇಂದಿರಾ ಕ್ಯಾಂಟೀನ್ ಆಹಾರವನ್ನು ಉಚಿತವಾಗಿ ಒದಗಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.

ABOUT THE AUTHOR

...view details