ಕರ್ನಾಟಕ

karnataka

ETV Bharat / state

ಸಚಿವ ಸ್ಥಾನದ ರೇಸ್​​​ನಲ್ಲಿ ನಾನಿಲ್ಲ, ಅವಕಾಶ ಕೊಟ್ಟರೆ ನಿರ್ವಹಿಸುತ್ತೇನೆ: ಸಿ.ಪಿ ಯೋಗೇಶ್ವರ್

ನಾನು ಕೂಡ ದೆಹಲಿಗೆ ಹೋಗಿ ನಿನ್ನೆ ವಾಪಸ್ ಬಂದಿದ್ದೇನೆ. ಸಂಪುಟ ವಿಸ್ತರಣೆ ಬಗ್ಗೆ 50-50 ಸಾಧ್ಯತೆ ಇದೆ. ಸಂಪುಟ ವಿಸ್ತರಣೆ ಕುರಿತು ನನಗೆ ಯಾವುದೇ ರೀತಿಯ ಸಂದೇಶ ಬಂದಿಲ್ಲ. ಆದರೆ ನಾನು ಸಚಿವ ಸ್ಥಾನದ ರೇಸ್​​ನಲ್ಲಿ ಇದ್ದೇನೆ ಎಂದು ಹೇಳಿಲ್ಲ, ಅವಕಾಶ ಕೊಟ್ಟರೆ ಕೆಲಸ ಮಾಡುತ್ತೇನೆ ಇಲ್ಲದಿದ್ದಲ್ಲಿ ಪಕ್ಷದ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಸಿಪಿ ಯೋಗೇಶ್ವರ್‌ ಹೇಳಿದ್ದಾರೆ.

CP Yogeshwar talks on Cabinet extension
ಸಚಿವ ಸ್ಥಾನದ ರೇಸ್​​​ನಲ್ಲಿ ನಾನಿಲ್ಲ, ಅವಕಾಶ ಕೊಟ್ಟರೆ ನಿರ್ವಹಿಸುತ್ತೇನೆ: ಸಿ.ಪಿ ಯೋಗೇಶ್ವರ್

By

Published : Sep 19, 2020, 2:05 PM IST

ಬೆಂಗಳೂರು: ಸಚಿವ ಸ್ಥಾನದ ರೇಸ್​​​ನಲ್ಲಿ ನಾನಿಲ್ಲ, ಆದರೆ ಸಂಪುಟದಲ್ಲಿ ಅವಕಾಶ ಸಿಕ್ಕರೆ ಕೆಲಸ ಮಾಡುತ್ತೇನೆ. ಇಲ್ಲದಿದ್ದರೆ ಪಕ್ಷದಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಜೆಪಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಅದರ ಬಗ್ಗೆ ನಿಖರ ಮಾಹಿತಿ ನನಗಿಲ್ಲ, ಅಧಿವೇಶನಕ್ಕೆ ಮೊದಲು ಅಥವಾ ನಂತರ ಆಗುತ್ತದೆಯೋ ಎನ್ನುವುದು ಖಚಿತವಾಗಿ ಗೊತ್ತಿಲ್ಲ ಎಂದಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್

ಮೊನ್ನೆ ನಾನು ಕೂಡ ದೆಹಲಿಗೆ ಹೋಗಿ ನಿನ್ನೆ ವಾಪಸ್ ಬಂದಿದ್ದೇನೆ. ಸಂಪುಟ ವಿಸ್ತರಣೆ ಬಗ್ಗೆ 50-50 ಸಾಧ್ಯತೆ ಇದೆ. ಸಂಪುಟ ವಿಸ್ತರಣೆ ಕುರಿತು ನನಗೆ ಯಾವುದೇ ರೀತಿಯ ಸಂದೇಶ ಬಂದಿಲ್ಲ. ಆದರೆ ನಾನು ಸಚಿವ ಸ್ಥಾನದ ರೇಸ್​​ನಲ್ಲಿ ಇದ್ದೇನೆ ಎಂದು ಹೇಳದಿದ್ದರೂ ಅವಕಾಶ ಕೊಟ್ಟರೆ ಕೆಲಸ ಮಾಡುತ್ತೇನೆ, ಇಲ್ಲದಿದ್ದಲ್ಲಿ ಪಕ್ಷದ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಸದ್ಯಕ್ಕಂತೂ ಅಪ್ರಸ್ತುತ ಇಂತಹ ಯಾವುದೇ ವಿದ್ಯಮಾನಗಳು ನಡೆದಿಲ್ಲ, ರಾಜ್ಯದಲ್ಲಿಯೂ ಇಲ್ಲ, ಕೇಂದ್ರದ ನಾಯಕರ ಮಟ್ಟದಲ್ಲಿಯೂ ಇಂತಹ ವಿಷಯಗಳ ಚರ್ಚೆಗೆ ಬಂದಿಲ್ಲ ಎಂದು ತಿಳಿಸಿದರು.

ಜೆಡಿಎಸ್ ನಾಯಕ ಹೆಚ್‌.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗಳು ಅಪ್ರಸ್ತುತವಾಗಿದ್ದು, ಅವರಿಬ್ಬರೂ ನಮ್ಮ ಪಕ್ಷದವರಲ್ಲ, ನನಗೆ ಸಿಗುವ ಸ್ಥಾನಮಾನ ತಪ್ಪಿಸುತ್ತಾರೆ ಎಂದು ನನಗೆ ಅನಿಸುವುದಿಲ್ಲ. ನಮ್ಮ ಪಕ್ಷದ ಮೇಲೆ ಪ್ರಭಾವ ಬೀರುವ ಶಕ್ತಿ ಅವರಿಗೆ ಉಳಿದಿಲ್ಲ, ಏನಾದರೂ ನಮ್ಮ ಸರ್ಕಾರದಿಂದ ಸಹಾಯ ಪಡೆಯಲು ಸಿಎಂ ಭೇಟಿ ಮಾಡಿರಬಹುದು ಅಷ್ಟೇ ಎಂದರು.

ಐವರಿಗೆ ಸಚಿವ ಸಂಪುಟದಲ್ಲಿ ಹೊಸದಾಗಿ ಸ್ಥಾನ ಕೊಡಲಾಗುತ್ತದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಪಿ ಯೋಗೇಶ್ವರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ನಾಯಕರು ಈ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಎಂದರು.

ABOUT THE AUTHOR

...view details