ಕರ್ನಾಟಕ

karnataka

ETV Bharat / state

ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಲಾಬಿ: ಸಿಎಂ ಭೇಟಿಯಾದ ಜಾರಕಿಹೊಳಿ, ಯೋಗೇಶ್ವರ್​ - ಬಸವರಾಜ ಬೊಮ್ಮಾಯಿ‌ ನವದೆಹಲಿಗೆ ತೆರಳುವ ಸಾಧ್ಯತೆ

ಸಿಎಂ ಗೃಹ ಕಚೇರಿ ಕೃಷ್ಣಾಗೆ, ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮತ್ತು ಸಿ.ಪಿ.ಯೋಗೇಶ್ವರ್​ ಭೇಟಿ ನೀಡಿ ಸಿಎಂ ಜೊತೆ ಮಾತು ಕಥೆ ನಡೆಸಿದರು.

KN_BNG_01
ಸಿಎಂ ಮನೆಗೆ ಭೇಟಿ ನೀಡಿದ ಜಾರಕಿಹೊಳಿ, ಯೋಗೀಶ್ವರ್

By

Published : Oct 18, 2022, 1:10 PM IST

ಬೆಂಗಳೂರು: ದೀಪಾವಳಿ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ನವದೆಹಲಿಗೆ ತೆರಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷೆಗಳು ಲಾಬಿ ಆರಂಭಿಸಿದ್ದು, ಸಂಪುಟಕ್ಕೆ ಮರುಸೇರ್ಪಡೆ ವಿಚಾರ ಕುರಿತು ರಮೇಶ್ ಜಾರಕಿಹೊಳಿ ಮತ್ತು ಸಿ.ಪಿ.ಯೋಗೇಶ್ವರ್ ಸಿಎಂ ಜೊತೆ ಮಾತುಕತೆ ನಡೆಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾಗೆ, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಸಿ.ಪಿ ಯೋಗೇಶ್ವರ್ ಭೇಟಿ ನೀಡಿ, ಸಿಎಂ ‌ಜತೆ ಮಾತುಕತೆ ನಡೆಸಿದರು. ಒಂದು ವಾರದಲ್ಲಿ ಸಿಎಂ ದೆಹಲಿಗೆ ತೆರಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಪುಟ ಸೇರ್ಪಡೆಗೆ ವರಿಷ್ಠರ ಜತೆ ಮಾತಾಡುವಂತೆ ಒತ್ತಾಯಿಸಿದರು ಎನ್ನಲಾಗ್ತಿದೆ.

ಸಧ್ಯದಲ್ಲೇ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ಆಕಾಂಕ್ಷಿಗಳು ಸಿಎಂ ನಿವಾಸಕ್ಕೆ ದೌಡಾಯಿಸುತ್ತ ಲಾಬಿ ಶುರು ಮಾಡಿದ್ದಾರೆ. ಹಾಗಾಗಿ ಸಿಎಂ ನಿವಾಸ ಮತ್ತು ಕಚೇರಿ ಇನ್ನೊಂದು ವಾರ ಸಚಿವಾಕಾಂಕ್ಷಿಗಳ ಭೇಟಿಯಿಂದ ರಂಗೇರಲಿದೆ.

ಇದನ್ನೂ ಓದಿ:ರಸ್ತೆ ಗುಂಡಿಗೆ ಮಹಿಳೆ ಬಲಿ: ಪೊಲೀಸರಿಂದ ವರದಿ ಕೇಳಿದ ಸಿಎಂ ಬೊಮ್ಮಾಯಿ..!

ABOUT THE AUTHOR

...view details