ಬೆಂಗಳೂರು: ಕೋವಿಡ್ ವೈರಸ್ಗೆ ಕಿಲ್ಲರ್ ಆಗಿರುವ ವ್ಯಾಕ್ಸಿನ್ ಅನ್ನು ರಾಜ್ಯದ ಎಲ್ಲ ಕಡೆಗೆ ರವಾನೆ ಮಾಡಲಾಗುತ್ತಿದ್ದು, ಇಂದು ಆನಂದರಾವ್ ವೃತ್ತದ ವ್ಯಾಕ್ಸಿನ್ ಉಗ್ರಾಣದಿಂದ ದಾಸಪ್ಪ ಆಸ್ಪತ್ರೆಗೆ ವ್ಯಾಕ್ಸಿನ್ ಹಸ್ತಾಂತರಿಸಲಾಯ್ತು.
ವ್ಯಾಕ್ಸಿನ್ ವ್ಯಾನ್ ಮುಂದೆ ಮಾರ್ಷಲ್ ಗಸ್ತು ಪಡೆಯ ಜೊತೆಗೆ ಹಿಂದೆ ಆ್ಯಂಬುಲೆನ್ಸ್ನೊಂದಿಗೆ ಬಿಬಿಎಂಪಿಗೆ ಕೋವಿಶೀಲ್ಡ್ ವ್ಯಾಕ್ಸಿನ್ ಹಸ್ತಾಂತರ ಮಾಡಲಾಗಿದೆ. ಬಿಬಿಎಂಪಿಗೆ 1,05,000 ಕೋವಿಶೀಲ್ಡ್ ವ್ಯಾಕ್ಸಿನ್ ಆರೋಗ್ಯ ಇಲಾಖೆಯಿಂದ ಹಸ್ತಾಂತರ ಮಾಡಲಾಗಿದೆ.