ಕರ್ನಾಟಕ

karnataka

ETV Bharat / state

ಕೋವಿಡ್ 19 ಲಸಿಕೆ : 6 ತಿಂಗಳಲ್ಲಿ ತಾತ್ಕಾಲಿಕ ಲೈಸೆನ್ಸ್ ಸಂಭವ..! - Covidine 19 vaccine

ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಅಮೆರಿಕ ಮುಂಚೂಣಿಯಲ್ಲಿದ್ದು, ಅದು ಫಲಪ್ರದವಾದರೆ ಮುಂದಿನ ಆರೇಳು ತಿಂಗಳಲ್ಲಿ ಪರವಾನಿಗೆ ಲಭ್ಯವಾಗಲಿದೆ ಎಂದು ಅಟ್ಲಾಂಟಾ ಎಮೋರಿ ವಿಶ್ವವಿದ್ಯಾಲಯದ ಲಸಿಕಾ ಕೇಂದ್ರದ ನಿರ್ದೇಶಕ ಡಾ.ರಫಿ ಅಹಮ್ಮದ್ ಸ್ಪಷ್ಟಪಡಿಸಿದರು.

Ashwath narayana
Ashwath narayana

By

Published : Aug 10, 2020, 7:14 PM IST

ಬೆಂಗಳೂರು:ಕೋವಿಡ್-19 ಲಸಿಕೆಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಸದ್ಯಕ್ಕೆ ಮೂರು ಲಸಿಕೆಗಳ ಕ್ಲಿನಿಕಲ್ ಟ್ರಯಲ್ ಗಳು ಮುಂಚೂಣಿಯಲ್ಲಿದ್ದು, ಅವು ಫಲಪ್ರದ ಎಂಬುದು ದೃಢಪಟ್ಟರೆ ಮುಂದಿನ 6ರಿಂದ 8 ತಿಂಗಳ ಅವಧಿಯಲ್ಲಿ ತಾತ್ಕಾಲಿಕ ಪರವಾನಗಿ ಲಭ್ಯವಾಗಬಹುದು ಎಂದು ಅಟ್ಲಾಂಟಾ ಎಮೋರಿ ವಿಶ್ವವಿದ್ಯಾಲಯದ ಲಸಿಕಾ ಕೇಂದ್ರದ ನಿರ್ದೇಶಕ ಡಾ.ರಫಿ ಅಹಮ್ಮದ್ ಸ್ಪಷ್ಟಪಡಿಸಿದರು.

ಕೋವಿಡ್-19 ಲಸಿಕೆಗಳ ಕ್ಲಿನಿಕಲ್ ಟ್ರಯಲ್ ನ ಸದ್ಯದ ಸನ್ನಿವೇಶದ ಬಗ್ಗೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಕೇಳಿದ ವಿವರಣೆಗೆ ವೀಡಿಯೋ ಸಂವಾದದ ಮೂಲಕ ಉತ್ತರಿಸಿದ ಅವರು, ಇವುಗಳಲ್ಲಿ ಎರಡು ಲಸಿಕೆಗಳು ಆರ್ ಎನ್ಎ ಆಧಾರಿತ ಲಸಿಕೆಗಳಾಗಿವೆ. ಒಂದೊಂದೂ ಲಸಿಕೆಗೆ 30,000 ಜನರನ್ನು ಕ್ಲಿನಿಕಲ್ ಟ್ರಯಲ್ ಗೆ ಒಳಪಡಿಸಲಾಗಿದ್ದು, ಇದು ಮೂರನೆಯ ಹಂತದಲ್ಲಿದೆ. ಟ್ರಯಲ್ ಗೆ ಒಳಪಟ್ಟವರನ್ನು ಸತತವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

30,000 ಜನರ ಮೌಲ್ಯಮಾಪನ ಹಾಗೂ ಅಂಕಿಅಂಶಗಳ ಅಧ್ಯಯನಕ್ಕೆ ಇಷ್ಟು ಸಮಯ ಹಿಡಿಯುತ್ತದೆ. ಕನಿಷ್ಠ ಶೇ 50ರಷ್ಟು ಜನರಿಗಾದರೂ ಇದು ಪರಿಣಾಮಕಾರಿ ಎಂಬುದು ದೃಢಪಟ್ಟರೆ 6ರಿಂದ 8 ತಿಂಗಳ ಅವಧಿಯಲ್ಲಿ ತಾತ್ಕಾಲಿಕ ಪರವಾನಗಿ ಸಿಗಬಹುದು ಎಂದರು.

ABOUT THE AUTHOR

...view details