ಬೆಂಗಳೂರು: ಕೋವಿಡ್ ವ್ಯಾಕ್ಸಿನ್ ವಿತರಿಸಲು ಎಲ್ಲ ರಾಜ್ಯಗಳು ಭರ್ಜರಿ ತಯಾರಿ ನಡೆಸಿವೆ. ಇದೀಗ ಲಸಿಕೆ ಸಂಗ್ರಹಣೆಗೆ ಕೋಲ್ಡ್ ಚೈನ್ ವ್ಯವಸ್ಥೆಯ ಲಭ್ಯತೆ ಬಗ್ಗೆ ಅಂಕಿ ಅಂಶವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಕೋವಿಡ್ ವ್ಯಾಕ್ಸಿನ್ ನೀಡಲು ಭರ್ಜರಿ ತಯಾರಿ: ರಾಜ್ಯದಲ್ಲಿ ಹೀಗಿದೆ ಸ್ಟೋರೇಜ್ ವ್ಯವಸ್ಥೆ
ಕೋವಿಡ್ ವ್ಯಾಕ್ಸಿನ್ ಸ್ಟೋರೇಜ್ ಹಾಗೂ ಸಾಗಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿದೆ.
ವ್ಯಾಕ್ಸಿನ್ ಸ್ಟೋರೇಜ್ ಹಾಗೂ ಸಾಗಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದು, ಕರ್ನಾಟಕ 2 ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕೋಲ್ಡ್ ಚೈನ್ ಪಾಯಿಂಟ್ಸ್, ವಾಕ್ ಇನ್ ಕೂಲರ್ಸ್, ಐಸ್ ಲೈನ್ ರೆಫ್ರಿಜರೇಟರ್, ಡೀಪ್ ಫ್ರೀಜರ್ನ ಉತ್ತಮ ವ್ಯವಸ್ಥೆ ಹೊಂದಿದೆ. ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲು ರಾಜ್ಯ ಸರ್ಕಾರ ಸಂಪೂರ್ಣ ತಯಾರಿ ನಡೆಸಿದೆ. ಜೊತೆಗೆ ಕೇಂದ್ರ ಸರ್ಕಾರ ಸಹ ಇನ್ನಷ್ಟು ವ್ಯವಸ್ಥೆ ಒದಗಿಸಲು ಒಪ್ಪಿಗೆ ಸೂಚಿಸಿದೆ.
ವ್ಯಾಕ್ಸಿನ್ ನೀಡಲು ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲಿ ಅತ್ಯುತ್ತಮ ವ್ಯವಸ್ಥೆ ಇರುವುದು ಈ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಹಾಗಾದ್ರೆ ರಾಜ್ಯದಲ್ಲಿರುವ ಕೋವಿಡ್ ವ್ಯಾಕ್ಸಿನ್ ಲಾಜಿಸ್ಟಿಕ್ ವ್ಯವಸ್ಥೆ ಏನೇನು ಎಂದು ನೋಡುವುದಾದರೆ:
ಲಾಜಿಸ್ಟಿಕ್ | ಮಹಾರಾಷ್ಟ್ರ | ಕರ್ನಾಟಕ | ಯು.ಪಿ |
ಕೋಲ್ಡ್ ಚೈನ್ ಪಾಯಿಂಟ್ಸ್ | 3257 | 2870 | 1308 |
ಡೀಪ್ ಫ್ರೀಜರ್ | 4199 | 3495 | 609 |
ಐಸ್ ಲೈನ್ಡ್ ರೆಫ್ರಿಜರೇಟರ್ಸ್ | 4408 | 3776 | 3574 |
ವಾಕ್ ಇನ್ ಕೂಲರ್ಸ್ | 18 | 09 | 30 |
ವಾಕ್ ಇನ್ ಫ್ರೀಜರ್ಸ್ | 06 | 05 | 10 |