ಬೆಂಗಳೂರು: ಕೋವಿಡ್-19 ಹೆಚ್ಚಾಗಿರುವ ಸ್ಥಳಗಳ ಅಪಾರ್ಟ್‌ಮೆಂಟ್‌ಗಳ ಮನೆಮನೆಗೂ ತೆರಳಿ ಲಸಿಕೆ ನೀಡಲು ಅಪೊಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆಯವರು ಬಂದು ಕೊರೊನಾ ಲಸಿಕೆ ನೀಡಲಾಗುತ್ತಿದೆ.
ಅಪೊಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆಯಿಂದ ಮನೆ ಬಾಗಿಲಿಗೇ ಕೊರೊನಾ ಲಸಿಕೆ - ಮಕ್ಕಳ ಆಸ್ಪತ್ರೆಯಿಂದ ಮನೆಬಾಗಿಲಿಗೆ ಕೋವಿಡ್-19 ಲಸಿಕೆ
ಏಪ್ರಿಲ್ 21, 2021ರವರೆಗೆ ತನ್ನ ಎರಡನೆಯ ಹಂತದಲ್ಲಿ ನಗರದಾದ್ಯಂತ ಲಸಿಕಾ ಅಭಿಯಾನ ಪ್ರಾರಂಭಿಸಲಿದೆ..
![ಅಪೊಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆಯಿಂದ ಮನೆ ಬಾಗಿಲಿಗೇ ಕೊರೊನಾ ಲಸಿಕೆ Apolo](https://etvbharatimages.akamaized.net/etvbharat/prod-images/768-512-placeholder.jpg)
Apolo
ಮೊದಲು ಯೋಜನೆಯ ಅಡಿ ಅಪೊಲೊ ಕ್ರೆಡಲ್ ನಗರದ ಅತಿದೊಡ್ಡ ಅಪಾರ್ಟ್ಮೆಂಟ್ ಸಂಕೀರ್ಣಗಳಾದ ಪ್ರೆಸ್ಟೀಜ್ ಶಾಂತಿನಿಕೇತನ ಮತ್ತು ಸ್ಟರ್ಲಿಂಗ್ ಶಾಲೋಮ್‌ನ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್‌ಗಳೊಂದಿಗೆ ಕೈ ಜೋಡಿಸಿ, ಯಶಸ್ವಿಯಾಗಿ 230ಕ್ಕೂ ಹೆಚ್ಚು ಫಲಾನುಭವಿಗಳೊಂದಿಗೆ, ತನ್ನ ಮೊದಲ ಲಸಿಕೆ ಹಂತ ಪೂರ್ಣಗೊಳಿಸಿದೆ.
ಅಪೊಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆ ಏಪ್ರಿಲ್ 21, 2021ರವರೆಗೆ ತನ್ನ ಎರಡನೆಯ ಹಂತದಲ್ಲಿ ನಗರದಾದ್ಯಂತ ಲಸಿಕೆ ಅಭಿಯಾನ ಪ್ರಾರಂಭಿಸಲಿದೆ. ಈ ಸೇವೆಯು ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದ ಸಾರ್ವಜನಿಕ ಹಿತಾಸಕ್ತಿಗಾಗಿ ಆರಂಭಿಸಲಾಗಿದೆ.