ಬೆಂಗಳೂರು: ಹೈದರಾಬಾದ್ನಿಂದ ಕೋವ್ಯಾಕ್ಸಿನ್ ಬಾಕ್ಸ್ ಸ್ಪೈಸ್ ಜೆಟ್ ವಿಮಾನದಲ್ಲಿ ಕೆಐಎ ಮೂಲಕ ರಾಜ್ಯಕ್ಕೆ ಬಂದಿದೆ. 20 ಸಾವಿರ ಡೋಸ್ ವ್ಯಾಕ್ಸಿನ್ ಇರುವ ಮೂರು ಬಾಕ್ಸ್ಗಳು ರಾಜ್ಯಕ್ಕೆ ಬಂದಿದೆ.
ಹೈದರಾಬಾದ್ನಿಂದ ಕೋವ್ಯಾಕ್ಸಿನ್ ಬಾಕ್ಸ್ ಬೆಳಗ್ಗೆ 8:30ಕ್ಕೆ ಬೆಂಗಳೂರಿಗೆ ಆಗಮಿಸಿದ್ದು, ಸದ್ಯ ಆನಂದ್ ರಾವ್ ವೃತ್ತದ ರಾಜ್ಯ ಲಸಿಕಾ ಉಗ್ರಾಣದಲ್ಲಿ ಶೇಖರಣೆ ಮಾಡಲಾಗಿದೆ. ಒಂದು ಸಾವಿರ ವಯಲ್ ವ್ಯಾಕ್ಸಿನ್ ಇದ್ದು, ಒಂದು ವಯಲ್ನಲ್ಲಿ 20 ಡೋಸ್ ಪ್ರಮಾಣದಷ್ಟು ವ್ಯಾಕ್ಸಿನ್ ಇದೆ. 10 ML ನ ಒಂದು ಸಾವಿರ ವ್ಯಾಕ್ಸಿನ್ ವಯಲ್ಸ್ ರಾಜ್ಯಕ್ಕೆ ಬಂದಿದೆ.