ಕರ್ನಾಟಕ

karnataka

ETV Bharat / state

ಮೊದಲ ದಿನದ ಮಕ್ಕಳ ಲಸಿಕೀಕರಣದಲ್ಲಿ ಹಾವೇರಿ ಫಸ್ಟ್, ಯಾದಗಿರಿ ಲಾಸ್ಟ್: ಜಿಲ್ಲಾವಾರು ವಿವರ..

15-18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಮೊದಲ ದಿನದ ಟಾರ್ಗೆಟ್ ಅರ್ಧ ಪೂರ್ಣಗೊಂಡಿದೆ.

ಮೊದಲ ದಿನದ ಮಕ್ಕಳ ಲಸಿಕೀಕರಣ
ಮೊದಲ ದಿನದ ಮಕ್ಕಳ ಲಸಿಕೀಕರಣ

By

Published : Jan 3, 2022, 8:26 PM IST

ಬೆಂಗಳೂರು:ರಾಜ್ಯದಲ್ಲಿ ಇಂದಿನಿಂದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, ಮೊದಲ ದಿನದ ಟಾರ್ಗೆಟ್ ಅರ್ಧದಷ್ಟು ಮುಗಿದಿದೆ. ಇಂದು 6,38,891 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದ ಆರೋಗ್ಯ ಇಲಾಖೆ, ಇದರಲ್ಲಿ 3,80,133 ಲಸಿಕೆ ಹಾಕಿದೆ.

ರಾಮನಗರ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಯಲ್ಲಿ ಲಸಿಕೆ ಶೇ.60 ರ ಗಡಿ ದಾಟಿದ್ದರೆ, ಇತ್ತ ಕೊಡಗು, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ನಿರೀಕ್ಷೆಗೂ ಮೀರಿ ಲಸಿಕೆ ಅಭಿಯಾನ ನಡೆಯಿತು. ಯಾದಗಿರಿಯಲ್ಲಿ ಶೇ.18 ರಷ್ಟು ಮಾತ್ರ ನಡೆದಿದ್ದು ಕೊನೆಯ ಸ್ಥಾನದಲ್ಲಿದೆ.

ಜಿಲ್ಲಾವಾರು ವ್ಯಾಕ್ಸಿನೇಷನ್‌ ವಿವರ ನೋಡೋಣ:

ಸರಾಸರಿಗಿಂತ ಕಡಿಮೆ ಲಸಿಕೀಕರಣ ಜಿಲ್ಲೆಗಳು % ಉತ್ತಮ ಲಸಿಕೀಕರಣ ಪೂರೈಸಿದ ಜಿಲ್ಲೆಗಳು %
ಯಾದಗಿರಿ 18 ರಾಮನಗರ 60
ಮೈಸೂರು 25 ಮಂಡ್ಯ 60
ಬೆಂಗಳೂರು ನಗರ 27 ದಾವಣಗೆರೆ 69
ಕೊಪ್ಪಳ 32 ತುಮಕೂರು 71
ಚಿಕ್ಬಳ್ಳಾಪುರ 32 ಶಿವಮೊಗ್ಗ 72
ಬಳ್ಳಾರಿ 34 ಕಲಬುರಗಿ 93
ವಿಜಯಪುರ 36 ದಕ್ಷಿಣ ಕನ್ನಡ 97
ಬೀದರ್ 37 ಕೊಡಗು 100
ಗದಗ 39 ಉಡುಪಿ 103
ರಾಯಚೂರು 44 ಉತ್ತರಕನ್ನಡ 103
ಚಾಮರಾಜನಗರ 49 ಹಾಸನ 128
ಬೆಂಗಳೂರು ಗ್ರಾಮಾಂತರ 50 ಚಿಕ್ಕಮಗಳೂರು 136
ಬಿಬಿಎಂಪಿ 55 ಕೋಲಾರ 181
ಚಿತ್ರದುರ್ಗ 57 ಬೆಳಗಾವಿ 220
ಬಾಗಲಕೋಟೆ 57 ಧಾರವಾಡ 225
ಹಾವೇರಿ 273

ABOUT THE AUTHOR

...view details