ಕರ್ನಾಟಕ

karnataka

ದೇವರ ದಯೆಯಿಂದ ಇನ್ನೂ ದೇಶಕ್ಕೆ ಮೂರನೇ ಅಲೆ ಕಾಲಿಟ್ಟಿಲ್ಲ: ಸಚಿವ ಡಾ.ಕೆ.ಸುಧಾಕರ್

By

Published : Nov 17, 2021, 6:52 PM IST

ಇತ್ತೀಚೆಗೆ ಪುರುಷರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತ ಪ್ರಕರಣಗಳು (Heart attack case) ಕಂಡುಬರುತ್ತಿವೆ. ಒಳ್ಳೆಯ ಆರೋಗ್ಯಕ್ಕೆ ವ್ಯಾಯಾಮ, ಆಹಾರ ಪದ್ಧತಿ ಮುಖ್ಯವಾಗಿದ್ದು, ಆದರೆ ಗ್ರಾಮೀಣ ಪ್ರದೇಶಗಳಲ್ಲೂ ಜನರು ಧೂಮಪಾನ, ಮದ್ಯಪಾನದಿಂದ ಅಸುನೀಗುತ್ತಿದ್ದಾರೆ. ಶೇ. 24ರಷ್ಟು ಸಾವಿಗೆ ಹೃದಯ ಸಮಸ್ಯೆ ಕಾರಣವಾಗಿದ್ದು, ಯುವಕರು ವ್ಯಾಯಾಮ, ಯೋಗಕ್ಕೆ ಮಹತ್ವ ಕೊಡಬೇಕಿದೆ ಎಂದು ತಿಳಿಸಿದರು.

Covid third wave not yet arrived in India, Minister Sudhakar
ಸಚಿವ ಡಾ. ಕೆ. ಸುಧಾಕರ್ ಹೇಳಿಕೆ

ಬೆಂಗಳೂರು:ದೇವರ ದಯೆಯಿಂದ ರಾಜ್ಯ, ದೇಶಕ್ಕೆ ಕೋವಿಡ್ ಮೂರನೇ ಅಲೆ (Covid-19 third wave) ಕಾಲಿಟ್ಟಿಲ್ಲ. ಅಂತಾರಾಷ್ಟ್ರೀಯ ಜನರಲ್ ಪ್ರಕಾರ ಭಾರತದಲ್ಲಿ ಕೋವಿಡ್ ಅಂತಿಮ ಹಂತ ತಲುಪಿದೆ ಎಂದು ತಿಳಿದುಬಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಹೇಳಿದ್ದಾರೆ.

ನಗರದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ (Jayadeva Heart Hospital inauguration in Bengaluru) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ವಿದೇಶಗಳಲ್ಲಿ ಕೋವಿಡ್ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ನಾವೆಲ್ಲರೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದ್ದು, ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು ಎಂದು ತಿಳಿಸಿದರು. ಗಾರ್ಡನ್ ಸಿಟಿ ಎಂದು ಕರೆಯಲ್ಪಡುವ ಬೆಂಗಳೂರಿಗೆ ಇನ್ಮುಂದೆ ಜಯದೇವ ಹೃದ್ರೋಗ ಸಿಟಿ ಎಂದು ಕರೆಸಿಕೊಳ್ಳುವ ಕಾಲ ಬರಲಿದೆ. 1,000 ಹಾಸಿಗೆಯುಳ್ಳ ವಿಶ್ವದ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆ ಬೆಂಗಳೂರಿನಲ್ಲಿದೆ. ಇದಕ್ಕೆ ನಾನು ಇನ್ಫೋಸಿಸ್ ಪ್ರತಿಷ್ಠಾನಕ್ಕೆ ನಮಿಸುತ್ತೇನೆ ಎಂದ ಸುಧಾಕರ್​, ರಾಜ್ಯದಲ್ಲಿ ಹೃದಯ ರೋಗದ ಸಮಸ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. 35 ವರ್ಷ ಮೇಲ್ಪಟ್ಟ, 50 ವರ್ಷದೊಳಗಿನ ಯುವ ಸಮೂಹವೂ ಹೃದಯಾಘಾತಕ್ಕೆ ತುತ್ತಾಗುತ್ತಿದೆ ಎಂದರು.

ಅದರಲ್ಲೂ ಪುರುಷರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತ ಪ್ರಕರಣಗಳು ಕಂಡುಬರುತ್ತಿವೆ. ಒಳ್ಳೆಯ ಆರೋಗ್ಯಕ್ಕೆ ವ್ಯಾಯಾಮ, ಆಹಾರ ಪದ್ಧತಿ ಮುಖ್ಯವಾಗಿದ್ದು, ಆದರೆ ಗ್ರಾಮೀಣ ಪ್ರದೇಶಗಳಲ್ಲೂ ಜನರು ಧೂಮಪಾನ, ಮದ್ಯಪಾನದಿಂದ ಅಸುನೀಗುತ್ತಿದ್ದಾರೆ. ಶೇ. 24ರಷ್ಟು ಸಾವಿಗೆ ಹೃದಯ ಸಮಸ್ಯೆ ಕಾರಣವಾಗಿದ್ದು, ಯುವಕರು ವ್ಯಾಯಾಮ, ಯೋಗಕ್ಕೆ ಮಹತ್ವ ಕೊಡಬೇಕಿದೆ ಎಂದು ತಿಳಿಸಿದರು.

ವಿಭಾಗೀಯ ಮಟ್ಟದಲ್ಲೂ ಆಸ್ಪತ್ರೆ:

ಕಲಬುರಗಿ, ಮೈಸೂರು, ಶಿವಮೊಗ್ಗದಲ್ಲಿ ಈಗಾಗಲೇ ಜಯದೇವ ಆಸ್ಪತ್ರೆ (Jayadeva Heart Hospital) ನಿರ್ಮಾಣಗೊಂಡಿದೆ. ಹುಬ್ಬಳ್ಳಿ ಸೇರಿ ವಿಭಾಗೀಯ ಮಟ್ಟದಲ್ಲೂ ಆಸ್ಪತ್ರೆ ತೆರೆಯುವ ಆಲೋಚನೆ ಸರ್ಕಾರಕ್ಕಿದೆ. 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಕೋವಿಡ್ ಸಮಯದಲ್ಲಿ ಇನ್ಫೋಸಿಸ್ ಕಟ್ಟಿಕೊಟ್ಟಿದೆ. ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, 250 ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ಯೋಚಿಸಲಾಗಿದೆ ಎಂದರು.

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರು ಜಿಮ್ ಮಾಡುವ ಸಂದರ್ಭದಲ್ಲಿ ಹೃದಯ ತೊಂದರೆಯಿಂದ ತೀರಿಕೊಂಡಿದ್ದಾರೆ. ಈ ಘಟನೆಯ ಬಳಿಕ ಯುವಕರು ಹೆದರಿ, ಆಸ್ಪತ್ರೆಯತ್ತ ಓಡಿ ಬರುತ್ತಿದ್ದಾರೆ. ಆದರೆ ಜಿಮ್ ಮಾಡುವುದರಿಂದ ಹೃದಯಕ್ಕೆ ಅಪಾಯ ಇಲ್ಲ. ಪೋಷಕರಿಗೆ ಹೃದಯ ಸಮಸ್ಯೆ ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ, ಆದರೆ ಅತಿಯಾದ ವ್ಯಾಯಾಮ ಒಳ್ಳೆಯದಲ್ಲ ಎಂದು ಹೇಳಿದರು.

ಇದನ್ನೂ ಓದಿ:Video - ಬೈಕ್​ನಲ್ಲಿ ಸೇತುವೆ ದಾಟುವ ವೇಳೆ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕರ ರಕ್ಷಣೆ

ABOUT THE AUTHOR

...view details