ಕರ್ನಾಟಕ

karnataka

ETV Bharat / state

ಕೋವಿಡ್ ಟೆಸ್ಟ್ ಮಾಡಿಸಿದ್ರಾ? ರಿಪೋರ್ಟ್​ಗಾಗಿ ಓಡಾಡಬೇಕಿಲ್ಲ, ಈ ರೀತಿ ಮಾಡಿ ಸಾಕು.. - ಕೋವಿಡ್ ಟೆಸ್ಟ್ ಸರ್ಕಾರದ ವೆಬ್ ಸೈಟ್

ಕೊರೊನಾ ಪರೀಕ್ಷಿಸಿ ಬಂದ ನಂತರ ರಿಪೋರ್ಟ್​ ಬಗ್ಗೆ ತಲೆಕೆಡಿಸಿಕೊಳ್ಳುವುದು ಸಾಮಾನ್ಯ. ಅದಕ್ಕೆಂದೇ ಆರೋಗ್ಯ ಇಲಾಖೆ ಇದೀಗ ಹೊಸ ಪ್ಲಾನ್​ ಮಾಡಿಕೊಂಡಿದೆ. www.covidwar.Karnataka.gov.in/service1 ಪೋರ್ಟಲ್‌ಗೆ ಹೋಗಿ ಐಡಿ ಎಂಟ್ರಿ ಮಾಡಿದರೆ ಕ್ಷಣಾರ್ಧದಲ್ಲೇ ಫಲಿತಾಂಶ ಸಿಗಲಿದೆ.

Health dept
ಆರೋಗ್ಯ ಇಲಾಖೆ

By

Published : Aug 19, 2020, 2:47 PM IST

ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ನಿತ್ಯ 50 ಸಾವಿರಕ್ಕೂ ಅಧಿಕ ಮಂದಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಈ ರೀತಿ ಟೆಸ್ಟ್‌ ಮಾಡಿಸಿಕೊಂಡು ಬಂದ್ಮೇಲೆ ನೆಗೆಟಿವ್- ಪಾಸಿಟಿವ್ ಅನ್ನೋ ಚಿಂತೆಯಲ್ಲೇ ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗಿ ಬಿಡ್ತಾರೆ.

ರಿಪೋರ್ಟ್‌ ತಿಳಿಯೋಕೆ ಆಸ್ಪತ್ರೆಯ ಲ್ಯಾಬ್‌ಗಳಿಗೆ ಅಲೆದಾಡುವುದನ್ನು ಕೂಡ ನೋಡಿದ್ದೇವೆ. ಈ ತಲೆನೋವು ತಪ್ಪಿಸಲು ಆರೋಗ್ಯ ಇಲಾಖೆ ಹೊಸ ವ್ಯವಸ್ಥೆ ಕಲ್ಪಿಸಿದೆ. ಕೋವಿಡ್ ಟೆಸ್ಟ್​ಗೆ ಸ್ವ್ಯಾಬ್ ಕೊಟ್ಟ ನಂತರ ನೀವೇ ರಿಸಲ್ಟ್ ನೋಡಬಹುದು. ಸರ್ಕಾರದ ವೆಬ್‌ಸೈಟ್​ಗೆ ಹೋಗಿ, SRF ಐಡಿ ನಮೂದಿಸಿದರೆ ಅಲ್ಲೇ ಫಲಿತಾಂಶ ಲಭ್ಯವಿರಲಿದೆ. ಹೀಗಾಗಿ, ಯಾವಾಗ ರಿಸ್ಟಲ್ ಬರುತ್ತೆ ಅಂತ ಕಾದು ಕೂತು ಆರೋಗ್ಯಾಧಿಕಾರಿಗಳನ್ನು ಕೇಳಬೇಕಿಲ್ಲ.

www.covidwar.Karnataka.gov.in/service1 ಪೋರ್ಟಲ್‌ಗೆ ಹೋಗಿ ಐಡಿ ಎಂಟ್ರಿ ಮಾಡಿದರೆ ಕ್ಷಣಾರ್ಧದಲ್ಲೇ ರಿಸ್ಟಲ್ ಸಿಗಲಿದೆ. ಈ ರಿಸ್ಟಲ್​ನಲ್ಲಿ ಪಾಸಿಟಿವ್ ಬಂತು ಅಂದರೆ ಗಾಬರಿ, ಆತಂಕವೂ ಬೇಡ. ಮನೆಯಲ್ಲೇ ಐಸೊಲೇಷನ್ ಆಗಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮನ್ನು ಆರೋಗ್ಯಾಧಿಕಾರಿಗಳು ಸಂಪರ್ಕಿಸಲಿದ್ದಾರೆ ಅಂತ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ತುರ್ತು ಸೇವೆಗೆ- 108, ಆಪ್ತಮಿತ್ರ ಹೆಲ್ಪ್ ಲೈನ್- 14410 ಈ ನಂಬರ್​ಗೆ ಕರೆ ಮಾಡುವಂತೆಯೂ ತಿಳಿಸಿದೆ.

ABOUT THE AUTHOR

...view details