ಬೆಂಗಳೂರು:ಆರ್ ಆರ್ ನಗರ ಉಪಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ, ಪೊಲೀಸ್ ಸಿಬ್ಬಂದಿಗೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆವತಿಯಿಂದ ಕೋವಿಡ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಆರೋಗ್ಯ ಇಲಾಖೆಯಿಂದ ಉಪಚುನಾವಣೆ ಕಾರ್ಯದಲ್ಲಿದ್ದ ಪೊಲೀಸರಿಗೆ ಕೋವಿಡ್ ಪರೀಕ್ಷೆ - by-election related news
ಆರ್ ಆರ್ ನಗರ ಉಪಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಲು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಬಿಬಿಎಂಪಿ
ಮೊಬೈಲ್ ವ್ಯಾನ್ ಮುಖಾಂತರ ಕೂಡ ನಿಗದಿತ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ನಗರದ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, 06.11.2020 ರಿಂದ 09.11.2020 ರ ಒಳಗಾಗಿ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಮಾಡಬೇಕೆಂದು ಪೊಲೀಸ್ ಇಲಾಖೆಗೆ ಪಾಲಿಕೆಗೆ ಕೇಳಿಕೊಂಡಿದೆ.
ಈಗಾಗಲೇ ಕೋವಿಡ್- 19 ಸಮುದಾಯದ ಹಂತಕ್ಕೆ ತಲುಪಲಿದ್ದು, ಆದ್ದರಿಂದ ಸಿಬ್ಬಂದಿ ಮತ್ತು ಜನಗಳ ಆರೋಗ್ಯ ಹಿತದೃಷ್ಟಿಯಿಂದ ಅದನ್ನು ನಿಯಂತ್ರಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದೆ.