ಕರ್ನಾಟಕ

karnataka

ETV Bharat / state

ವಿಧಾನ ಪರಿಷತ್ ಪ್ರವೇಶಕ್ಕೆ ಕೋವಿಡ್ ಟೆಸ್ಟ್ ಕಡ್ಡಾಯ: ಪರಿಷತ್ ಕಾರ್ಯದರ್ಶಿ ಸ್ಪಷ್ಟನೆ - ಕೋವಿಡ್ ಟೆಸ್ಟ್

ಕಲಾಪ ಆರಂಭಕ್ಕೂ ಮುನ್ನ ಹಾಗೂ ಮುಗಿದ ತಕ್ಷಣ ಪರಿಷತ್​ನ ಸಭಾಂಗಣ, ಮೊಗಸಾಲೆಯನ್ನು ಎರಡೆರಡು ಬಾರಿ ಸ್ಯಾನಿಟೈಸ್ ಮಾಡುತ್ತೇವೆ. ಸಾಮಾಜಿಕ ಅಂತರಕ್ಕೆ ಹೆಚ್ಚು ಮಹತ್ವ ನೀಡಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕಲಾಪ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ತಿಳಿಸಿದ್ದಾರೆ.

ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ
ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ

By

Published : Sep 18, 2020, 3:24 PM IST

ಬೆಂಗಳೂರು:ವಿಧಾನಮಂಡಲ ಅಧಿವೇಶನ ಸೆಪ್ಟೆಂಬರ್​ 21ರಿಂದ ಆರಂಭವಾಗಲಿದ್ದು, ಕಲಾಪಕ್ಕೆ ಹಾಜರಾಗುವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಪತ್ರಕರ್ತರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಾಪ ಆರಂಭಕ್ಕೂ ಮುನ್ನ ಹಾಗೂ ಮುಗಿದ ತಕ್ಷಣ ಪರಿಷತ್​ನ ಸಭಾಂಗಣ, ಮೊಗಸಾಲೆಯನ್ನು ಎರಡೆರಡು ಬಾರಿ ಸ್ಯಾನಿಟೈಸ್ ಮಾಡುತ್ತೇವೆ. ಸಾಮಾಜಿಕ ಅಂತರಕ್ಕೆ ಹೆಚ್ಚು ಮಹತ್ವ ನೀಡಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕಲಾಪ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ

ಪಿಎಗಳು ಮತ್ತು ಗನ್ ಮ್ಯಾನ್​ಗಳು ಮೊದಲ ಮಹಡಿಗೆ ಬರುವಂತಿಲ್ಲ. ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರುವಂತೆ ಪರಿಷತ್ ಸದಸ್ಯರಿಗೆ ಮಾಹಿತಿ ನೀಡಿದ್ದೇವೆ ಎಂದರು.

9 ವಿಧೇಯಕಗಳು: ಪ್ರಸ್ತುತ ಅಧಿವೇಶನದಲ್ಲಿ ಇದುವರೆಗೂ ಒಟ್ಟು 1254 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ನಿಯಮ 72ರಲ್ಲಿ 34 ಸೂಚನೆಗಳನ್ನು ಹಾಗೂ ನಿಯಮ 330ರ ಅಡಿಯಲ್ಲಿ 24 ಸೂಚನೆಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.

ಕಳೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗಿರುವ ವಿಧೇಯಕಗಳ ಪೈಕಿ ವಿಧಾನ ಪರಿಷತ್ತಿನಲ್ಲಿ 9 ವಿಧೇಯಕಗಳು ಬಾಕಿಯಿದ್ದು, ಅವುಗಳ ಪೈಕಿ ಎರಡು ವಿಧೇಯಕಗಳಿಗೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಅವುಗಳನ್ನು ಹಿಂಪಡೆಯಲಾಗುವುದು ಹಾಗೂ ಉಳಿದ 7 ವಿಧೇಯಕಗಳು ಮಂಡನೆಯಾಗಲಿವೆ ಎಂದು ತಿಳಿಸಿದರು.

ABOUT THE AUTHOR

...view details