ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ತೀವ್ರತೆ ಹಂತ ಹಂತವಾಗಿ ಇಳಿಮುಖವಾಗುತ್ತಿದೆ. ಕೊರೊನಾ ಯಾವ ಹಂತದಲ್ಲಿದೆ ಎಂಬುದರ ಕುರಿತು ಸೆಪ್ಟೆಂಬರ್ನಲ್ಲಿ ಸರ್ವೆ ಕಾರ್ಯ ನಡೆಸಲಾಗಿತ್ತು.
ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಯಾವ ರೀತಿ ಅಭಿವೃದ್ಧಿಯಾಗಿದೆ ಎಂಬುದರ ಕುರಿತು ಎಲ್ಲಾ ಮಟ್ಟದಲ್ಲೂ ಸೆರೋ ಸಮೀಕ್ಷೆ ನಡೆಸಲಾಗಿತ್ತು. ಇದೀಗ ಆರೋಗ್ಯ ಇಲಾಖೆಯು ಎರಡನೇ ಹಂತದ ಸಮೀಕ್ಷೆಗೆ ಸಜ್ಜಾಗುತ್ತಿದ್ದು, ಕೊರೊನಾ ರೋಗ ನಿರೋಧಕ ಶಕ್ತಿ ಯಾವ ರೀತಿ ಹೆಚ್ಚಾಗಿದೆ. ಭವಿಷ್ಯದಲ್ಲಿ ಕೊರೊನಾ ಹೇಗೆ ಕಾಡಲಿದೆ ಎಂಬ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲು ಮುಂದಾಗಿದೆ.
ಜನವರಿ 25ರಿಂದ ಎರಡನೇ ಸುತ್ತಿನ ಸಮೀಕ್ಷೆ ಪ್ರಾರಂಭವಾಗಿದ್ದು, ಈಗಾಗಲೇ ಸೋಂಕಿಗೆ ಒಳಗಾಗಿರುವ ಹಾಗೂ ಸದ್ಯ SARS-COV-2 ಸೋಂಕು ಹೊಂದಿರುವ ಜನಸಂಖ್ಯೆಯ ಅನುಪಾತವನ್ನು ನಿಗದಿ ಮಾಡುವುದು ಇದರ ಗುರಿಯಾಗಿದೆ. ಈ ಸಮೀಕ್ಷೆಗೆ 18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಒಳಪಡಿಸಲಾಗಿದೆ. ಬಿಬಿಎಂಪಿಯ ಎಂಟು ವಲಯಗಳು ಸೇರಿದಂತೆ, ರಾಜ್ಯದ ಎಲ್ಲಾ 30 ಜಿಲ್ಲೆಗಳನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ.
ಸಮೀಕ್ಷೆಯಿಂದ ವಿನಾಯಿತಿ ನೀಡಲಾದ ಮಾನದಂಡಗಳು ಹೀಗಿವೆ:
ಕೋವಿಡ್ ಖಚಿತ ಪಟ್ಟ ಪ್ರಕರಣಗಳು
ಪರೀಕ್ಷೆಗಾಗಿ ಮಾದರಿಗಳನ್ನು ಒದಗಿಸಲು ಇಚ್ಛಿಸದವರು
ಒಪ್ಪಿಗೆ ಪತ್ರಕ್ಕೆ ಮಾಹಿತಿ ನೀಡಲು ಸಾಧ್ಯವಿಲ್ಲದವರು
ಮೊದಲ ಸುತ್ತಿನ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು