ಬೆಂಗಳೂರು: ಇಂದು ಶುಭ ಶುಕ್ರವಾರವಾದ ಹಿನ್ನೆಲೆಯಲ್ಲಿ ಅನೇಕ ಸಚಿವರು ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ತಮ್ಮ ಕಚೇರಿ ಪೂಜೆ ನೆರವೇರಿಸಿದರು.
ವಿಧಾನಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿದ ಸಚಿವರು: ಕೋವಿಡ್ ನಿಯಮ ಉಲ್ಲಂಘನೆ - vidhana soudha pooje
ನಾಗರಪಂಚಮಿ ಮತ್ತು ಶುಭ ಶುಕ್ರವಾರವಾದ ಹಿನ್ನೆಲೆಯಲ್ಲಿ ಸಚಿವರಾದ ಸುನಿಲ್ ಕುಮಾರ್, ನಿರಾಣಿ, ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಸಚಿವರು ಕಚೇರಿ ಪೂಜೆ ನೆರವೇರಿಸಿದರು. ಈ ವೇಳೆ ನೂಕು ನುಗ್ಗಲು ಏರ್ಪಟ್ಟಿತ್ತು. ಜೊತೆಗೆ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ ದೃಶ್ಯ ಕಂಡುಬಂದಿತು.
Covid rule violation
ನಾಗರಪಂಚಮಿ ಹಬ್ಬವಾದ ಕಾರಣ ಸಚಿವರಾದ ಸುನಿಲ್ ಕುಮಾರ್, ಸಚಿವ ಭೈರತಿ ಬಸವರಾಜ್, ಸಚಿವ ಮುರುಗೇಶ್ ನಿರಾಣಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗು ಶಿವರಾಂ ಹೆಬ್ಬಾರ್ ತಮ್ಮ ಕಚೇರಿ ಪೂಜೆ ಮಾಡಿ, ಅಧಿಕೃತವಾಗಿ ಕಾರ್ಯಾರಂಭ ಮಾಡಿದರು. ಆದರೆ ಕಚೇರಿ ಪೂಜೆ ಹೆಸರಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಿತು.
ಕಚೇರಿ ಪೂಜೆಯ ಸಂದರ್ಭದಲ್ಲಿ ತಮ್ಮ ತಮ್ಮ ಕ್ಷೇತ್ರದಿಂದ ನೂರಾರು ಮಂದಿ ಆಗಮಿಸಿ ಸಚಿವರಿಗೆ ಶುಭ ಕೋರಿದರು. ಈ ವೇಳೆ ಸಾಮಾಜಿಕ ಅಂತರ ಪಾಲನೆ ಮಾಡದಿರುವುದರ ಜೊತೆಗೆ ನೂಕು ನುಗ್ಗಲಿನಲ್ಲಿ ಹಲವರು ಮಾಸ್ಕ್ ಧರಿಸದೆ ಇದ್ದ ದೃಶ್ಯ ಕಂಡು ಬಂತು.