ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರಿಕೆಯಾಗಿದ್ದು, ಇಂದು 1280 ಜನರಿಗೆ ಮಹಾಮಾರಿ ಸೋಂಕು ವಕ್ಕರಿಸಿದೆ.
ಬೆಂಗಳೂರಲ್ಲಿ ಮತ್ತೆ ಕೋವಿಡ್ ಆರ್ಭಟ: ಒಂದೇ ದಿನದಲ್ಲಿ 1,280 ಜನರಲ್ಲಿ ಸೋಂಕು ದೃಢ - bangalore covid news
ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಇಂದು ಒಂದೇ ದಿನದಲ್ಲಿ 1280 ಜನರಲ್ಲಿ ಸೋಂಕು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10,766 ಇದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ 4,19,838 ಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 10,766 ಇದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ 4,19,838 ಕ್ಕೆ ಏರಿಕೆಯಾಗಿದೆ. ಇಂದು 399 ಜನ ಗುಣಮುಖರಾಗಿದ್ದು, ಒಟ್ಟು 4,04,515 ಮಂದಿ ಈವರೆಗೆ ಬಿಡುಗಡೆಯಾಗಿದ್ದಾರೆ.
ಇಂದು ಮೂವರು ಮೃತಪಟ್ಟಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ 4,556 ಕ್ಕೆ ಏರಿಕೆಯಾಗಿದೆ. 19 ನೇ ತಾರೀಕು 1037 ಪ್ರಕರಣ, 20 ರಂದು 1186, 21 ರಂದು 1039, 22 ರಂದು 886 ಪ್ರಕರಣ ಇದ್ದು, ಇಂದು ಮತ್ತೆ ಏರಿಕೆಯಾಗಿದೆ. ಪಾಲಿಕೆ ವ್ಯಾಪ್ತಿಗೆ ಪ್ರತಿನಿತ್ಯ ಕೋವಿಡ್ ಲಸಿಕೆ ಪೂರೈಕೆ ಆಗುತ್ತಿದ್ದು, ನಿತ್ಯ 20 ರಿಂದ 50 ಸಾವಿರ ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತಿದೆ.