ಬೆಂಗಳೂರಲ್ಲಿ ನಿಯಂತ್ರಣಕ್ಕೆ ಬಂದ ಕೋವಿಡ್ : ಹೊಸ ಪ್ರಕರಣಗಳ ಇಳಿಕೆ, ಹೆಚ್ಚಿನ ಜನ ಗುಣಮುಖ
ಅತ್ಯಧಿಕ ಕೋವಿಡ್ ಪಾಟಿಸಿವ್ ಪ್ರಕರಣಗಳು ದಾಖಲಾಗುವುದರ ಜೊತೆಗೆ ಸಾವಿನ ಪ್ರಮಾಣ ಏರಿಕೆಯಾಗಿ ಹೈರಾಣಾಗಿದ್ದ ರಾಜಧಾನಿ ಬೆಂಗಳೂರು ಮೆಲ್ಲಗೆ ಚೇತರಿಸಿಕೊಳ್ಳುತ್ತಿದೆ. ಕಳೆದ 10 ದಿನಗಳ ಹೊಸ ಪ್ರಕರಣ ಮತ್ತು ಸಂಖ್ಯೆ ನೋಡಿದರೆ ಸಿಲಿಕಾನ್ ಸಿಟಿ ಮಂದಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡಬಹುದು..
ಬೆಂಗಳೂರು ಕೋವಿಡ್
By
Published : May 30, 2021, 2:30 PM IST
|
Updated : May 30, 2021, 2:35 PM IST
ಬೆಂಗಳೂರು :ರಾಜಧಾನಿ ಬೆಂಗಳೂರಿನಲ್ಲಿತಿಂಗಳ ಹಿಂದೆ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದರು. ನಿತ್ಯ ಸಾವಿರಾರು ಹೊಸ ಪ್ರಕರಣ, ನೂರಾರು ಮಂದಿಯ ಸಾವು ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಸದ್ಯ ಬೆಂಗಳೂರಿಗರು ಕೊರೊನಾದಿಂದ ನಿಟ್ಟುಸಿರು ಬಿಡುವ ಸಮಯ ಸನಿಹವಾಗಿದೆ.
ಬೆಂಗಳೂರಿನಲ್ಲಿ ಕೊರೊನಾದಿಂದ ಗುಣಮುಖರಾಗುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಕೊರೊನಾ ಪಾಸಿಟಿವ್ ರೇಟ್ಗಿಂತ ಗುಣಮುಖರಾಗುವವರ ಸಂಖ್ಯೆ ನಿರಂತರ ಹೆಚ್ಚಳವಾಗ್ತಿದೆ.
ಕಳೆದ ಹತ್ತು ದಿನಗಳಿಂದ ಹೆಚ್ಚಿನ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಯಾವ ದಿನ ಎಷ್ಟೆಷ್ಟು ಹೊಸ ಪ್ರಕರಣಗಳು ಬಂದಿವೆ, ಎಷ್ಟು ಮಂದಿ ಗುಣಮುಖರಾಗಿದ್ದಾರೆ ಎಂಬುವುದರ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದ್ದು, ಅವು ಈ ರೀತಿಯಿದೆ.
ಕ್ರ.ಸಂ
ದಿನಾಂಕ
ಪಾಟಿಸಿವ್
ಗುಣಮುಖ
ಹೆಚ್ಚು
1
ಮೇ 20
9,408
25,776
289
2
ಮೇ 21
9,591
26,956
129
3
ಮೇ 22
8,214
36,030
200
4
ಮೇ 23
7,494
12,407
363
5
ಮೇ 24
5,699
34,378
297
6
ಮೇ 25
6,243
13,210
350
7
ಮೇ 26
6,433
18,342
285
8
ಮೇ 27
5,949
6,643
273
9
ಮೇ 28
5,736
31,237
192
10
ಮೇ 29
4,889
21,126
278
ಸದ್ಯ ಗುಣಮುಖರ ಸಂಖ್ಯೆ ಏರಿಕೆ ಆಗುತ್ತಿದ್ದು, ಸಕ್ರಿಯ ಪ್ರಕರಣಗಳು ಕಡಿಮೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಲಾಕ್ಡೌನ್ ಫಲಪ್ರದವಾಗಿದೆ.
ಬೆಂಗಳೂರಿಗರು ಕೊಂಚ ನೆಮ್ಮದಿಯಾಗಿ ಉಸಿರಾಡಬಹುದಾಗಿದೆ. ತಜ್ಞರು ಹೇಳುವಂತೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಬಹುಬೇಗ ಸೋಂಕು ನಮ್ಮಿಂದ ದೂರವಾಗಲಿದೆ.