ಕರ್ನಾಟಕ

karnataka

ETV Bharat / state

ಉಪ ಚುನಾವಣೆ ನಂತರ ಎರಡು ಕ್ಷೇತ್ರಗಳಿಕೆ ಕೊರೊನಾ ಹೊಡೆತ: 187 ಮಂದಿಯಲ್ಲಿ ಕೋವಿಡ್ ಪಾಸಿಟಿವ್ - ಕೋವಿಡ್ ಪಾಸಿಟಿವ್

ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ ಬಳಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ನಹುಪಾಲು ಜನರಿಗೆ ಕೊರೊನಾ ವಕ್ಕರಿಸಿದೆ.

covid-positive-in-187-people-after-two-constituency-by-elections
ಉಪ ಚುನಾವಣೆ ನಂತರ ಎರಡು ಕ್ಷೇತ್ರಗಳಿಕೆ ಕೊರೊನಾ ಹೊಡೆತ

By

Published : Nov 12, 2020, 12:08 AM IST

ಬೆಂಗಳೂರು: ರಾಜ್ಯದ ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ ಬಳಿಕ ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ ಆರರಿಂದ ಹತ್ತರವರೆಗೆ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ ವರದಿ ಬಂದಿದ್ದು, 187 ಮಂದಿಯಲ್ಲಿ ಪಾಸಿಟಿವ್ ಬಂದಿದೆ.

ಆರ್ ಆರ್ ನಗರದಲ್ಲಿ ನ.6 ರಿಂದ 10 ರವರೆಗೆ 14727 ಮಂದಿಯ ಕೋವಿಡ್ ಪರೀಕ್ಷೆ ನಡೆಸಿದ್ದು, 84 ಮಂದಿಯಲ್ಲಿ ಪಾಸಿಟಿವ್ ಬಂದಿದ್ದು, ಪಾಸಿಟಿವ್ ಪ್ರಮಾಣ 0.57% ಇದೆ. ಈ ಪೈಕಿ ಚುನಾವಣಾ ಸಿಬ್ಬಂದಿಯಲ್ಲಿ 2310 ಮಂದಿ ಪರೀಕ್ಷೆ ನಡೆಸಿದಾಗ 6 ಮಂದಿಯಲ್ಲಿ ಪಾಸಿಟಿವ್ ಬಂದಿದ್ದು, 0.26 ಶೇಕಡಾ ಪಾಸಿಟಿವಿಟಿ ಪ್ರಮಾಣ ಇದೆ.

ಇನ್ನು 287 ಪೊಲೀಸ್ ಸಿಬ್ಬಂದಿ ಪರೀಕ್ಷೆ ನಡೆಸಿದಾಗ ಎಲ್ಲರಲ್ಲೂ ನೆಗೆಟಿವ್ ಬಂದಿದೆ. ಜನಸಮಾನ್ಯರಲ್ಲಿ 12417 ಮಂದಿಯ ಪರೀಕ್ಷೆ ನಡೆಸಿದಾಗ 78 ಮಂದಿಯಲ್ಲಿ ಪಾಸಿಟಿವ್ ಬಂದಿದ್ದು, ಪಾಸಿಟಿವಿಟಿ ಪ್ರಮಾಣ 0.62 ಇದೆ. ಶಿರಾದಲ್ಲಿ 15874 ಮಂದಿಯ ಸೋಂಕು ಪರೀಕ್ಷೆ ನಡೆಸಿದಾಗ 103 ಮಂದಿಯಲ್ಲಿ ಪಾಸಿಟಿವ್ ಬಂದಿದ್ದು, 0.65% ಇದೆ. ಈ ಪಾಸಿಟಿವಿಟಿ ಪ್ರಮಾಣ ರಾಜ್ಯದ ಕೋವಿಡ್ ಪಾಸಿಟಿವಿಟಿ ಪ್ರಮಾಣಕ್ಕಿಂತ ಕಡಿಮೆ ಇದೆ ಎಂದು ರಾಜ್ಯದ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ.

ABOUT THE AUTHOR

...view details