ಬೆಂಗಳೂರು: ರಾಜ್ಯದಲ್ಲಿ ಮತ್ತೆ 166 ಶಿಕ್ಷಕರು,ಸಿಬ್ಬಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ 161 ಶಿಕ್ಷಕರಾಗಿದ್ದು, 5 ಮಂದಿ ಸಿಬ್ಬಂದಿಗೆ ಸೋಂಕು ತಗುಲಿದೆ.
ರಾಜ್ಯದ 166 ಶಿಕ್ಷಕರು,ಸಿಬ್ಬಂದಿಯಲ್ಲಿ ಕೋವಿಡ್ ಪಾಸಿಟಿವ್ - ಕೊರೊನಾ ಇತ್ತೀಚಿನ ಸುದ್ದಿ
ಕೋವಿಡ್ ಪರೀಕ್ಷೆ ಕಡ್ಡಾಯವಾಗಿರುವುದರಿಂದ ಪರೀಕ್ಷೆ ನಡೆಸಿದ ಪರಿಣಾಮ 166 ಶಿಕ್ಷಕರು,ಸಿಬ್ಬಂದಿಯಲ್ಲಿ ಕೋವಿಡ್ ದೃಢಪಟ್ಟಿದೆ.
![ರಾಜ್ಯದ 166 ಶಿಕ್ಷಕರು,ಸಿಬ್ಬಂದಿಯಲ್ಲಿ ಕೋವಿಡ್ ಪಾಸಿಟಿವ್ Covid Positive for 166 Teacher](https://etvbharatimages.akamaized.net/etvbharat/prod-images/768-512-10158534-thumbnail-3x2-nin.jpg)
ರಾಜ್ಯದ 166 ಶಿಕ್ಷಕ, ಸಿಬ್ಬಂದಿಯಲ್ಲಿ ಕೋವಿಡ್ ಪಾಸಿಟಿವ್
ರಾಜ್ಯದ ಶಾಲೆಗಳಲ್ಲಿ ವಿದ್ಯಾಗಮ ಯೋಜನೆ, ಎಸ್ಎಸ್ಎಲ್ಸಿ, ಪ್ರೌಢ ಶಾಲೆಗಳು ಆರಂಭವಾಗಿವೆ. ಕೊರೊನಾ ಲಕ್ಷಣ ಇದ್ದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿರುವುದರಿಂದ ಪರೀಕ್ಷೆ ನಡೆಸಿದ ಪರಿಣಾಮ 166 ಜನರಲ್ಲಿ ಕೋವಿಡ್ ದೃಢಪಟ್ಟಿದೆ.
ಬೆಳಗಾವಿಯಲ್ಲಿ 18, ಉತ್ತರ ಕನ್ನಡದಲ್ಲಿ 19, ಮೈಸೂರು, ಶಿವಮೊಗ್ಗ, ತುಮಕೂರಲ್ಲಿ, ಗದಗ 11, ಚಿಕ್ಕಮಗಳೂರಿನಲ್ಲಿ 13 ಶಿಕ್ಷಕರಲ್ಲಿ ಕೋವಿಡ್ ಕಂಡು ಬಂದಿದೆ. ಪಾಸಿಟಿವ್ ಬಂದ ಹಲವೆಡೆ ಶಾಲೆಗಳಿಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ. ಶಾಲೆಗಳನ್ನು ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.