ಬೆಂಗಳೂರು: ಹೋಂ ಐಸೊಲೇಷನ್ನಲ್ಲಿದ್ದ ಕೊರೊನಾ ಸೋಂಕಿತ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿರುವ ಘಟನೆ ನಗರದ ವಿಶ್ವಪ್ರಿಯ ಲೇಔಟ್ನಲ್ಲಿ ನಡೆದಿದೆ.
ಉಸಿರಾಟದ ತೊಂದರೆಯಿಂದ ಸೋಂಕಿತ ಸಾವು: ಬೇಗೂರಿನಲ್ಲಿ ಮತ್ತೊಂದು ಮನ ಕಲಕುವ ಘಟನೆ - covid patient died by scarcity of oxygen
ಬೆಡ್ಗಾಗಿ ಪರದಾಡಿ ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
![ಉಸಿರಾಟದ ತೊಂದರೆಯಿಂದ ಸೋಂಕಿತ ಸಾವು: ಬೇಗೂರಿನಲ್ಲಿ ಮತ್ತೊಂದು ಮನ ಕಲಕುವ ಘಟನೆ covid-patient-died-by-scarcity-of-oxygen-in-bengalore](https://etvbharatimages.akamaized.net/etvbharat/prod-images/768-512-11641331-thumbnail-3x2-sanju.jpg)
ಉಸಿರಾಟದ ತೊಂದರೆಯಿಂದ ಸೋಂಕಿತ ಮೃತ
ಉಸಿರಾಟದ ತೊಂದರೆಯಿಂದ ಸೋಂಕಿತ ಮೃತಪಟ್ಟಿರುವ ವಿಡಿಯೋ
ಬೆಡ್ಗಾಗಿ ಕಳೆದ ಎರಡು ದಿನಗಳಿಂದ ಪರದಾಡಿದ್ದ ವ್ಯಕ್ತಿ ಕೊನೆಗೆ ಅನಿವಾರ್ಯವಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮಧ್ಯಾಹ್ನ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಬಿಬಿಎಂಪಿ ಆರೋಗ್ಯ ಸಿಬ್ಬಂದಿಗೆ ಕುಟುಂಬದವರು ಕರೆ ಮಾಡಿದ್ದಾರೆ. ನಂತರ ಅವರು ಕಡೆ ಕ್ಷಣದವರೆಗೆ ಪ್ರಯತ್ನ ಪಟ್ಟರೂ ಸೋಂಕಿತ ವ್ಯಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಓದಿ:13 ಆಸ್ಪತ್ರೆ ಸುತ್ತಿದರೂ ಸಿಗದ ಚಿಕಿತ್ಸೆ, ಬೆಡ್: ದಾವಣಗೆರೆಯಲ್ಲಿ ಯುವತಿಯ ದಾರುಣ ಸಾವು