ಬೆಂಗಳೂರು:ಕಳೆದ ಮಂಗಳವಾರದಂದು 52 ವರ್ಷದ ಕೋವಿಡ್ ಸೋಂಕಿತ ವ್ಯಕ್ತಿ ಹದಿನೆಂಟು ಆಸ್ಪತ್ರೆಗಳನ್ನು ಸುತ್ತಾಡಿದ್ರೂ ಚಿಕಿತ್ಸೆ ನೀಡಿರಲಿಲ್ಲ. ಇದರಿಂದ ಆ ವ್ಯಕ್ತಿ ಸಾನ್ನಪ್ಪಿದ್ದರು. ನಿನ್ನೆಯೂ ವಿಕ್ಟೋರಿಯಾ ಆಸ್ಪತ್ರೆಯ ಮುಂದೆಯೇ ಆಂಬುಲೆನ್ಸ್ನಲ್ಲಿ ವ್ಯಕ್ತಿ ಜೀವ ಬಿಟ್ಟಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯವಹಿಸಿದ ಆಸ್ಪತ್ರೆಗಳ ವಿರುದ್ಧ ಎಫ್ಐಆರ್ ದಾಖಲಿಸಲು ಬಿಬಿಎಂಪಿ ನಿರ್ಧರಿಸಿದೆ.
ಕೋವಿಡ್ ರೋಗಿ ಸಾವು ವಿವಾದ... ಖಾಸಗಿ ಆಸ್ಪತ್ರೆ ವಿರುದ್ಧ ಎಫ್ಐಆರ್ ದಾಖಲಿಸಲು ಬಿಬಿಎಂಪಿ ನಿರ್ಧಾರ - ಕೋವಿಡ್ ರೋಗಿ ಸಾವು ವಿವಾದ,
ನಗರದಲ್ಲಿ ಕೋವಿಡ್ ರೋಗಿಗೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಖಾಸಗಿ ಆಸ್ಪತ್ರೆಗಳ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದೆ.

ಖಾಸಗಿ ಆಸ್ಪತ್ರೆ ವಿರುದ್ಧ ಎಫ್ಐಆರ್ ದಾಖಲು ಬಿಬಿಎಂಪಿ ನಿರ್ಧಾರ
ಖಾಸಗಿ ಆಸ್ಪತ್ರೆ ವಿರುದ್ಧ ಎಫ್ಐಆರ್ ದಾಖಲು ಬಿಬಿಎಂಪಿ ನಿರ್ಧಾರ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್, ಆರೋಗ್ಯ ಇಲಾಖೆ ನಿನ್ನೆ ಕಾರಣ ಕೇಳಿ ನೋಟಿಸ್ನ್ನು ಸಂಬಂಧಿಸಿದ ಆಸ್ಪತ್ರೆಗಳಿಗೆ ನೀಡಿದೆ. ಬಿಬಿಎಂಪಿ ವತಿಯಿಂದ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.