ಬೆಂಗಳೂರು :ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಬಿಬಿಎಂಪಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದೆ.
ಇಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ನಡೆಸಿದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯಲ್ಲಿ 80 ಆಸ್ಪತ್ರೆಗಳ ಮುಖ್ಯಸ್ಥರು ಭಾಗಿಯಾಗಿದ್ದರು. ಶೇ.40ರಷ್ಟು ಖಾಸಗಿ ಆಸ್ಪತ್ರೆಗಳ ಬೆಡ್ ಮೀಸಲಿಡುವಂತೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸೂಚಿಸಿದರು. ಪ್ರಾಥಮಿಕವಾಗಿ ಶೇ.10ರಷ್ಟು ಬೆಡ್ ನೀಡಲು ಸೂಚಿಸಲಾಗಿದೆ.
ಬಿಬಿಎಂಪಿ ಬೇಡಿಕೆಗೆ ಒಪ್ಪಿರುವ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ಹಂತ ಹಂತವಾಗಿ ಬೆಡ್‌ಗಳನ್ನ ಪಡೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಮೊದಲು ಮೆಡಿಕಲ್ ಕಾಲೇಜುಗಳಲ್ಲಿ ಬೆಡ್‌ಗಳನ್ನ ನೀಡಿ, ಬಳಿಕ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಬೆಡ್ ನೀಡಲಾಗುವುದು. ಒಂದೇ ಬಾರಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಪಡೆಯುವುದು ಬೇಡ.
ಮೊದಲು 100 ಬೆಡ್ ಇರುವ ಆಸ್ಪತ್ರೆಗಳು, ನಂತರ 50 ಬೆಡ್ ಇರುವ ಆಸ್ಪತ್ರೆಗಳಿಗೆ ಬನ್ನಿ ಎಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಸೂಚಿಸಿದ್ದಾರೆ. ಸಭೆಯಲ್ಲಿ ನಿರ್ಧಾರವಾಗಿರುವ ಅನುಸಾರ ಪ್ರಾಥಮಿಕ ಹಂತದಲ್ಲಿ ಮೆಡಿಕಲ್ ಕಾಲೇಜುಗಳ ಬೆಡ್‌ಗಳನ್ನ ಬಿಬಿಎಂಪಿ ಪಡೆದಿದೆ.
ಇದನ್ನೂ ಓದಿ..ಅತೀ ಹೆಚ್ಚು ಸೋಂಕಿತರು ಇರುವ ವಾರ್ಡ್‌ಗಳನ್ನು ಗುರುತಿಸಿದ ಬಿಬಿಎಂಪಿ