ಬೆಂಗಳೂರು :ನಿತ್ಯ ಪತ್ರಿಕೆಗಳಲ್ಲಿ ಹಲವಾರು ಛಾಯಾಚಿತ್ರಗಳನ್ನು ಕಾಣುತ್ತೇವೆ. ಅದರಲ್ಲಿ ಎಷ್ಟೋ ಚಿತ್ರಪಟಗಳು ಜನರ ಮೆಚ್ಚುಗೆಗೆ ಪಾತ್ರವಾಗಿರುತ್ತವೆ. ಅಂತಹ ಚಿತ್ರಗಳನ್ನು ಕ್ಲಿಕ್ಕಿಸಿದ ಫೋಟೋ ಜರ್ನಲಿಸ್ಟ್ಗಳ ಪಟಗಳನ್ನು ನಗರದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.
ಕೊರೊನಾ ಇಡೀ ವಿಶ್ವವನ್ನೇ ನಡುಗಿಸಿದೆ. ಪ್ರತಿ ಕ್ಷಣ ಉಸಿರಾಡೋದಕ್ಕೂ ಭಯ ಪಡುವಂತಾಗಿದೆ. ಈ ಸಮಯದಲ್ಲಿ ಪ್ರಜೆಗಳ ಹಿತದೃಷ್ಠಿಗಾಗಿ ಪ್ರಧಾನಿ ಕೂಡ ದೇಶದೆಲ್ಲಡೆ ಲಾಕ್‌ಡೌನ್ ಘೋಷಿಸಿದ್ದರು. ಲಾಕ್‌ಡೌನ್ ಸಮಯದಲ್ಲಿ ಪೊಲೀಸರು, ಪೌರ ಕಾರ್ಮಿಕರು, ವೈದ್ಯರು ಜನರ ಒಳಿತಿಗಾಗಿ ಕೊರೊನಾ ಭಯ ಬಿಟ್ಟು ಕಾರ್ಯ ನಿರ್ವಹಿಸಿದ್ದಾರೆ.
ಇವರ ಜೊತೆ ಜೊತೆಗೆ ಮಾಧ್ಯಮದವರು ಕೂಡ ಪ್ರತಿಕ್ಷಣದ ಸುದ್ದಿಯನ್ನ ಜನರಿಗೆ ತಲುಪಿಸುವಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಪತ್ರಿಕಾ ಮಾಧ್ಯಮದ ಛಾಯಾಗ್ರಾಹಕರು ತಮ್ಮ ಕೆಲಸದ ಅವಧಿಯಲ್ಲಿ ತಾವು ಕ್ಲಿಕ್ಕಿಸಿದ ವಿಭಿನ್ನ ಛಾಯಾಚಿತ್ರಗಳನ್ನ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಕ್ಕಿರಿಸಿದ್ದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರು ಬಿರು ಬಿಸಿಲಿನಲ್ಲಿ ಕಾಯಲು ಆಗದೇ ತಮ್ಮ ಪಾದರಕ್ಷೆಗಳನ್ನ ಸಾಲಿನಲ್ಲಿ ಇರಿಸಿರುವ ಚಿತ್ರ. ಲಾಕ್‌ಡೌನ್ ಸಮಯದಲ್ಲಿ ಮನೆ ಬಾಡಿಗೆ ಕಟ್ಟಲಾಗದೇ ಊರು ಬಿಟ್ಟು ಹೊಗುತ್ತಿರುವ ಜನರು. ಪ್ರತಿಮೆಗಳಿಗೂ ಮಾಸ್ಕ್ ಹಾಕಿ ಎಲ್ಲರೂ ಧರಿಸಬೇಕೆಂದು ಜಾಗೃತಿ ಮೂಡಿಸುವ ಚಿತ್ರ.