ದೇವನಹಳ್ಳಿ(ಬೆಂಗಳೂರು): ಚೀನಾದಲ್ಲಿ ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಭಾರತದ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯಂತೆ ಇಂದಿನಿಂದ (ಡಿಸೆಂಬರ್ 24) ಬೆಳಗ್ಗೆ 10 ಗಂಟೆ ಜಾರಿಯಾಗುವಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಲಾಗುತ್ತದೆ. ವಿದೇಶದಿಂದ ಬರುವ ಶೇಕಡಾ 2 ರಷ್ಟು ಪ್ರಯಾಣಿಕರ ರ‍್ಯಾಂಡಮ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅವರ ಸ್ವ್ಯಾಬ್ ಮಾದರಿ ಸಂಗ್ರಹಿಸಿದ ನಂತರ ಅವರನ್ನ ಕಳುಹಿಸಲಾಗುತ್ತದೆ.