ಕರ್ನಾಟಕ

karnataka

ETV Bharat / state

ಅಂಗಾಂಗ ದಾನಕ್ಕೂ ಬಂತು ಕೋವಿಡ್ ಪಾಸಿಟಿವ್- ನೆಗೆಟಿವ್ ಪ್ರಶ್ನೆ...! - The decline in organ donation numbers

ಪ್ರತಿ ವರ್ಷ ಸಾವಿರಾರು ಮಂದಿ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು, ಅಂಗಾಂಗಕ್ಕೆ ಕಾಯುವ ಪರಿಸ್ಥಿತಿ ಉಂಟಾಗಿದೆ. ಕೋವಿಡ್ ಕಾರಣದಿಂದಾಗಿ ನೋಂದಣಿ ಸಂಖ್ಯೆ ಕಡಿಮೆಯಾಗಿದ್ದಲ್ಲದೇ, ದಾನಿಗಳ ಸಂಖ್ಯೆಯೂ ಕುಸಿತವಾಗಿದೆ.

covid-disruption-to-organ-donation
ಮಂಜುಳಾ ಕೆ. ಇ

By

Published : Nov 9, 2020, 6:26 PM IST

ಬೆಂಗಳೂರು: ಕೋವಿಡ್ ವೈರಸ್​ನಿಂದ ರಕ್ತ ದಾನಕ್ಕೂ ಸಂಕಷ್ಟ ಎದುರಾಗಿದ್ದು ಗೊತ್ತೇ ಇದೆ. ಆದ್ರೀಗ ಅಂಗಾಂಗ ದಾನಕ್ಕೂ ಕೋವಿಡ್ ಅಡ್ಡಗಾಲು ಹಾಕಿದೆ. ಸದ್ಯ ಪರಿಸ್ಥಿತಿ ಹೇಗಿದೆ ಅಂದರೆ, ಅಂಗಾಂಗ ದಾನ ಸಿಕ್ಕರೂ, ಕೊರೊನಾ ಪಾಸಿಟಿವ್​ ಇದೆಯೇ? ಅಥವಾ ನೆಗಟಿವ್ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಮಂಜುಳಾ ಕೆ. ಇ ಮಾತನಾಡಿದರು
ಪ್ರತಿ ವರ್ಷ ಸಾವಿರಾರು ಮಂದಿ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು, ಅಂಗಾಂಗಕ್ಕೆ ಕಾಯುವ ಪರಿಸ್ಥಿತಿ ಉಂಟಾಗಿದೆ. ‌ಆದರೆ ಕೋವಿಡ್ ಕಾರಣದಿಂದಾಗಿ ನೋಂದಣಿ ಸಂಖ್ಯೆ ಕಡಿಮೆಯಾಗಿದ್ದಲ್ಲದೇ, ದಾನಿಗಳ ಸಂಖ್ಯೆಯೂ ಕುಸಿತವಾಗಿದೆ. ಸರ್ಕಾರವು ಮಾನವ ಅಂಗ ಕಸಿ ಕಾಯ್ದೆಯನ್ನು 1994ರಲ್ಲಿ ಜಾರಿ ಮಾಡಿತು. ಮಿದುಳಿನ ನರಕೋಶಗಳು ಸತ್ತರೆ, ಮೃತ ಶರೀರದ ಅಂಗಕಸಿ ಮಾಡುವುದನ್ನ ಕಾನೂನುಬದ್ಧವೆಂದು ಮಾಡಿದೆ. ಕರ್ನಾಟಕದಲ್ಲಿ ಅನುಕೂಲವಾಗಲೆಂದು ಅಂಗಾಂಗ ದಾನಕ್ಕಾಗಿ ಜೀವಸಾರ್ಥಕತೆ ರಚಿಸಲಾಗಿದೆ. ಜೀವಸಾರ್ಥಕತೆ ಸಂಸ್ಥೆಯ ಅಂಕಿ ಅಂಶ ಪ್ರಕಾರ, 10 ಲಕ್ಷ ಜನಸಂಖ್ಯೆಯಲ್ಲಿ 800 ದೀರ್ಘಾವಧಿ ಕಿಡ್ನಿ ಸಮಸ್ಯೆಗಳಿದ್ದು 150 -200 ಕಿಡ್ನಿ ರೋಗದ ಕೊನೆಯ ಹಂತದಲ್ಲಿದೆ. ಸುಮಾರು 3ಲಕ್ಷ ಜನರು ಕಿಡ್ನಿ ಕಸಿಗಾಗಿ ಕಾಯುತ್ತಿದ್ದು, ಪ್ರತಿ ವರ್ಷ 10 ಸಾವಿರ ಜನರಿಗೆ ಮಾತ್ರ ಕಸಿ ಮಾಡಲಾಗುತ್ತಿದೆ. ಸರಿ ಸುಮಾರು ಒಂದು ಲಕ್ಷ ರೋಗಿಗಳು ಲಿವರ್ ಕಸಿಗಾಗಿ ಕಾಯುತ್ತಿದ್ದು, ಶೇ. 3ಕ್ಕಿಂತ ಕಡಿಮೆ ರೋಗಿಗಳಿಗೆ ಮಾತ್ರ ಅಂಗಾಂಗ ಲಭ್ಯವಾಗುತ್ತಿದೆ.ಜೀವಸಾರ್ಥಕತೆಯಲ್ಲಿ ಬೆಳಕಾದವರ ಅಂಕಿ- ಅಂಶ:
ವರ್ಷ ಹೃದಯ ಲಿವರ್ ಕಿಡ್ನಿ ಕಾರ್ನಿಯಾ
2016 17 66 109 120
2017 18 61 106 112
2018 33 75 118 134


4000ಕ್ಕೂ ಹೆಚ್ಚು ಜನರು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. 40-50 ಜನರಿಗೆ ಈ ವರ್ಷ ಕಿಡ್ನಿ ಸಿಕ್ಕಿದೆ‌. ಕೊರೊನಾ ಆರಂಭದಲ್ಲಿ ಹಲವರು ಪರೀಕ್ಷೆ ಮಾಡಿಸಬೇಕು ಎಂಬ ಕಾರಣಕ್ಕೆ ಮುಂದೆ ಬರುತ್ತಿರಲಿಲ್ಲ. ಆದರೆ, ಇದೀಗ ಕೊರೊನಾ ಬಗ್ಗೆ ಮಾಹಿತಿ ಇರುವುದರಿಂದ ಪರೀಕ್ಷೆ ಮಾಡಿಸಿ ನೆಗಟಿವ್ ಬಂದರೆ ಅಂಗದಾನ ಮಾಡಲು ಕುಟುಂಬದವರು ಮುಂದಾಗುತ್ತಿದ್ದಾರೆ ಅಂತಾರೆ ಜೀವಸಾರ್ಥಕತೆ ಸಂಸ್ಥೆಯ ಮುಖ್ಯ ಸಂಯೋಜಕರಾದ ಮಂಜುಳಾ ಕೆ. ಇ.

ABOUT THE AUTHOR

...view details