ಬೆಂಗಳೂರು: ದೇಶದಲ್ಲಿ ಕೊರೊನಾ ಲಸಿಕೆ (Covid-19 Vaccine) ಲಭ್ಯವಾಗುತ್ತಿದ್ದಂತೆ ಜನರು ಕ್ಯೂ ನಿಂತು ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದರು. ಸೋಂಕಿನಿಂದ ಗುಣಮುಖರಾದವರು ಲಸಿಕೆ ಪಡೆಯಲು ಮೂರು ತಿಂಗಳು ಕಾದಿದ್ದರು. ಆದರೆ ಮೊದಲ ಡೋಸ್ ಪಡೆಯಲು ಆಸಕ್ತಿ ತೋರಿದ್ದ ಜನರು ಎರಡನೇ ಡೋಸ್ (Covid Second Dose) ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಆದಷ್ಟು ಬೇಗ ಲಸಿಕೆ ಪಡೆಯದಿದ್ದರೆ ಜನರಿಗೆ ಸಂಕಷ್ಟ ಎದುರಾಗಲಿದೆ. ಈ ಬಗ್ಗೆ ಬಿಬಿಎಂಪಿ(BBMP) ಎಚ್ಚರಿಕೆ ನೀಡಿದೆ. ಕೊರೊನಾ ಮೊದಲ ಅಲೆ (Covid first Wave), ಎರಡನೇ ಅಲೆ ಸಾವಿನ ಪರಿಶೋಧನಾ ವರದಿ (death audit report) ಬಿಡುಗಡೆಗೆ ಪಾಲಿಕೆ ಸಿದ್ಧತೆ ನಡೆಸುತ್ತಿದೆ. ಮುಂದಿನ ವಾರ ಆರೋಗ್ಯ ಸಚಿವರ ಸಮ್ಮುಖದಲ್ಲಿ ಕೊರೊನಾ ಡೆತ್ ಆಡಿಟ್ ವರದಿ ಬಿಡುಗಡೆ ಮಾಡಲಾಗುತ್ತಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಕೋವಿಡ್(covid-19)ಗೆ ಬಲಿಯಾದವರ ಸಂಖ್ಯೆಯ ಕುರಿತು ಮಾಹಿತಿ ನೀಡಲಾಗುತ್ತಿದೆ.
ಕೋವಿಡ್ಗೆ (Covid) ಹೆಚ್ಚಾಗಿ ಯಾವ ವಯಸ್ಸಿನವರು ಬಲಿಯಾಗಿದ್ದಾರೆ ಎಂಬ ಅಂಕಿ ಅಂಶಗಳನ್ನ ಪಾಲಿಕೆ ನೀಡಿದೆ. ಮೊದಲ, ಎರಡನೇ ಅಲೆಯಲ್ಲಿ(Covid Second Wave) ಬೆಂಗಳೂರಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಒಟ್ಟು 16,307, ಈ ಪೈಕಿ 4,480 ಮೊದಲ ಅಲೆಯಲ್ಲಿ ಮತ್ತು 11,827 ಮಂದಿ ಎರಡನೇ ಅಲೆಯಿಂದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೊರೊನಾ ಡೆತ್ ಆಡಿಟ್ ವರದಿ ಬಿಡುಗಡೆಯಾಗಲಿದೆ. 'ಈಟಿವಿ ಭಾರತ'(ETV Bharat)ಕ್ಕೆ ಸದ್ಯ ಲಭ್ಯವಾಗಿರುವ ವಿವರ ಇಲ್ಲಿದೆ.
ಮೊದಲ ಅಲೆಯಲ್ಲಿ ಸಾವನ್ನಪ್ಪಿದವರ ವಿವರ:
ಪುರುಷರು : 3,048
ಮಹಿಳೆಯರು : 1,431
ತೃತೀಯ ಲಿಂಗಿಗಳು : 01
ಒಟ್ಟು : 4,480
ಮೊದಲ ಅಲೆಯಲ್ಲಿ 70 ವರ್ಷ ಮೇಲ್ಪಟ್ಟವರೇ ಹೆಚ್ಚು ಮೃತಪಟ್ಟಿದ್ದು, 1,459 ಮಂದಿ ಬಲಿಯಾಗಿದ್ದಾರೆ. ಈ ಪೈಕಿ 439 ಮಹಿಳೆಯರು ಮತ್ತು 1,020 ಮಂದಿ ಪರುಷರು ಸೇರಿದ್ದಾರೆ.
ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರ ವಿವರ: