ಕರ್ನಾಟಕ

karnataka

ETV Bharat / state

ಸರ್ವಜ್ಞನಗರ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕೊಠಡಿ ಉದ್ಘಾಟನೆ

ಸರ್ವಜ್ಞನಗರ ಕ್ಷೇತ್ರದ ಮರಿಯನಿಕೇತನ್ ಶಾಲೆಯಲ್ಲಿ ಕೋವಿಡ್ ನಿಯಂತ್ರಣ ಕೊಠಡಿಯನ್ನು ಸರ್ವನನಗರ ಕ್ಷೇತ್ರದ ಶಾಸಕ ಕೆ.ಜೆ. ಜಾರ್ಜ್ ಮತ್ತು ವಸತಿ ಸಚಿವ ಶ್ರೀ ವಿ ಸೋಮಣ್ಣ ಉದ್ಘಾಟಿಸಿದರು.

somanna
somanna

By

Published : Jul 22, 2020, 10:35 AM IST

ಬೆಂಗಳೂರು:ಮಾಜಿ ಸಚಿವ ಮತ್ತು ಸರ್ವಜ್ಞನಗರ ಕ್ಷೇತ್ರದ ಶಾಸಕ ಕೆ.ಜೆ. ಜಾರ್ಜ್ ಮತ್ತು ವಸತಿ ಸಚಿವ ವಿ ಸೋಮಣ್ಣ ಅವರು ಸರ್ವಜ್ಞನಗರ ಕ್ಷೇತ್ರದ ಮರಿಯನಿಕೇತನ್ ಶಾಲೆಯಲ್ಲಿ ಕೋವಿಡ್ ನಿಯಂತ್ರಣ ಕೊಠಡಿ ಉದ್ಘಾಟಿಸಿದರು.

ಕೊರೊನಾ ವೈರಸ್ ನಿಗ್ರಹವನ್ನು ಖಚಿತಪಡಿಸಿಕೊಳ್ಳಲು ಇದು ಅತ್ಯಾಧುನಿಕ ಸೌಲಭ್ಯವುಳ್ಳ ಯಂತ್ರೋಪಕರಣಗಳು, ಜ್ವರ ಚಿಕಿತ್ಸಾಲಯಗಳು ಮತ್ತು ವೈದ್ಯಕೀಯ ನೆರವು ಹೊಂದಿದೆ.

ಕೋವಿಡ್ ನಿಯಂತ್ರಣ ಕೊಠಡಿ ಉದ್ಘಾಟನೆ

ಕೋವಿಡ್ ನಿಯಂತ್ರಣ ಕೊಠಡಿ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಸಚಿವ ಸೋಮಣ್ಣ, ಶಿವಾಜಿನಗರ, ಶಾಂತಿನಗರ, ಪುಲಿಕೇಶಿನಗರ ಮತ್ತು ಸರ್ವಜ್ಞನಗರಗಳು ಹೆಚ್ಚು ಜನನಿಬಿಡ ಪ್ರದೇಶಗಳಾಗಿದ್ದು, ಈ ನಾಲ್ಕು ಕ್ಷೇತ್ರಗಳ ಕೋವಿಡ್ ಕೇರ್ ಕೇಂದ್ರಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ ಎಂದು ತಿಳಿಸಿದರು.

ಶಿವಾಜಿನಗರದ ಬ್ರಾಡ್ ವೇ ಆಸ್ಪತ್ರೆಯು ಸುಮಾರು 12 ಕೋಟಿ ವೆಚ್ಚದಲ್ಲಿ ಇನ್ಫೋಸಿಸ್ ಸಹಾಯದೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಡಿ ನಿರ್ಮಾಣವಾಗಿದೆ. ಮುಂದಿನ ವಾರ ಮಾನ್ಯ ಮುಖ್ಯಮಂತ್ರಿ ಅವರಿಂದ ಈ ಆಸ್ಪತ್ರೆಯು ಉದ್ಘಾಟನೆಯಾಗಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಕೋವಿಡ್-19ಗೆ ಸಂಬಂಧಿಸಿದಂತೆ 150 ಆಕ್ಸಿಜನ್ ಸಿಲಿಂಡರ್ ಮತ್ತು 35 ಐಸಿಯು ಬೆಡ್​ಗಳು ಸಹ ಬ್ರಾಡ್ ವೇ ಆಸ್ಪತ್ರೆ ಹೊಂದಿದೆ ಎಂದರು.

ಶಾಸಕ ಕೆ.ಜೆ.ಜಾರ್ಜ್ ಮಾತನಾಡಿ, ಸರ್ವನಗರ ಕ್ಷೇತ್ರದ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದೇವೆ ಎಂದರು. ಸಾರ್ವಜನಿಕರ ಸುರಕ್ಷತೆಗಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ABOUT THE AUTHOR

...view details