ಕರ್ನಾಟಕ

karnataka

ETV Bharat / state

ಕೊರೊನಾ ಮರಣ ಮೃದಂಗ: ಇಂದು 3,693 ಕೇಸ್ ಪತ್ತೆ, 115 ಬಲಿ..​ ಸಾವಿನ ಸಂಖ್ಯೆ 1,147ಕ್ಕೆ ಏರಿಕೆ! - ಸಾವಿನ ಸಂಖ್ಯೆ 1,147ಕ್ಕೆ ಏರಿಕೆ

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಇಂದು ಒಂದೇ ದಿನ 3,693 ಹೊಸ‌ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದರೆ, 115 ಮಂದಿ ಬಲಿಯಾಗಿದ್ದಾರೆ. ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 1,147ಕ್ಕೆ ಏರಿಕೆಯಾಗಿದೆ.

total case
ಕೊರೊನಾ ಕೇಸ್​

By

Published : Jul 17, 2020, 7:07 PM IST

Updated : Jul 17, 2020, 7:54 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಜೊತೆ ಜೊತೆಗೆ ಸಾವಿನ ಪ್ರಮಾಣವೂ ಏರಿಕೆ ಆಗುತ್ತಿದೆ. ‌ಇಂದು ಒಂದೇ ದಿನ 3,693 ಹೊಸ‌ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದರೆ, 115 ಮಂದಿ ಸಾವನ್ನಪ್ಪಿದ್ದಾರೆ.

ಒಟ್ಟಾರೆ ಸೋಂಕಿತರ ಸಂಖ್ಯೆ 55,115 ಕ್ಕೆ ಏರಿದ್ದರೆ, ಮೃತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಇಂದು 115 ಮಂದಿ ಸೇರಿದಂತೆ ಈವರೆಗೆ 1,147 ಸೋಂಕಿತರು ಬಲಿಯಾಗಿದ್ದಾರೆ.

ಇಂದು 1,028 ಮಂದಿ ಗುಣಮುಖರಾಗಿದ್ದು, ಈವರೆಗೆ 20,757 ಮಂದಿ ಚೇತರಿಸಿಕೊಂಡಿದ್ದಾರೆ.‌ ಸಕ್ರಿಯ 33,205 ಪ್ರಕರಣಗಳಿದ್ದು, ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ 24,700 ಜನಕ್ಕೆ ಕೊರೊನಾ‌ ಪರೀಕ್ಷೆ ಮಾಡಿದ್ದು, 3,693 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಈವರೆಗೆ ಕೊರೊನಾ ಪರೀಕ್ಷೆಯನ್ನ 9,50,177 ಮಂದಿ ಮಾಡಿಸಿಕೊಂಡಿದ್ದಾರೆ.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ ಶೇಕಡಾ 37. 66 ರಷ್ಟು ಇದ್ದರೆ, ಸಾವಿನ ಪ್ರಮಾಣ 2.05 % ಇದೆ.

Last Updated : Jul 17, 2020, 7:54 PM IST

ABOUT THE AUTHOR

...view details