ಕರ್ನಾಟಕ

karnataka

By

Published : Jun 13, 2022, 5:18 PM IST

ETV Bharat / state

ಬೆಂಗಳೂರಿನಲ್ಲಿ ಕೋವಿಡ್ ಅಬ್ಬರ: 10 ದಿನದಲ್ಲಿ ಸೋಂಕು 3 ಪಟ್ಟು ಹೆಚ್ಚಳ

ರಾಜ್ಯ ರಾಜಧಾನಿಯಲ್ಲಿ ಕೊರೊನಾ ಅಬ್ಬರ ಹೆಚ್ಚಾಗುತ್ತಿದೆ. ಕಳೆದ 10 ದಿನದಲ್ಲಿ ಸೋಂಕಿನ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಅಲ್ಲದೇ ಕಳೆದ ಏಳು ದಿನಗಳಲ್ಲಿ‌ ಒಟ್ಟು 2,845 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಪಾಲಿಕೆಯ ದಾಖಲೆಗಳಿಂದ ತಿಳಿದುಬಂದಿದೆ.

ಕೊರೊನಾ
ಕೊರೊನಾ

ಬೆಂಗಳೂರು:ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು ಕಳೆದ ಹತ್ತು ದಿನದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಈ‌ ಹಿಂದೆ ಶೇ.1.1ರಷ್ಟಿದ್ದ ಪಾಸಿಟಿವಿಟಿ ದರ ಶೇ. 2.61ಕ್ಕೆ ತಲುಪಿದೆ ಎಂದು ಪಾಲಿಕೆಯ ದಾಖಲೆಗಳು ಹೇಳುತ್ತವೆ. ಬಿಬಿಎಂಪಿ ಕೋವಿಡ್ ವರದಿಯ ಪ್ರಕಾರ, ಕಳೆದ ಏಳು ದಿನಗಳಲ್ಲಿ‌ ಒಟ್ಟು 2,845 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನದಲ್ಲಿ 429 ಜನರಿಗೆ ಸೋಂಕು ತಗುಲಿದೆ.

ಪಾಲಿಕೆ ವ್ಯಾಪ್ತಿಯ ಹತ್ತು ವಾರ್ಡ್‌ಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗಿದೆ. ಈ ಪೈಕಿ ಮಹಾದೇವಪುರ ಮತ್ತು ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ವಾರ್ಡ್​ಗಳಲ್ಲಿ ಅಧಿಕ ಜನರು ಸೋಂಕಿಗೆ ತುತ್ತಾಗಿದ್ದಾರೆ. ಈ ವ್ಯಾಪ್ತಿಯಲ್ಲಿನ ವಾರ್ಡ್​ಗಳಲ್ಲಿ ಅತ್ಯಧಿಕ ಜನಸಂಖ್ಯೆ ಇದ್ದು ಹಾಗೂ ಕೋವಿಡ್ ಭೀತಿ ಕಡಿಮೆಯಾದಾಗಿನಿಂದ ಈವರೆಗೆ ಸರ್ಕಾರದ ಮಾರ್ಗಸೂಚಿ ಪಾಲಿಸದಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಕೋವಿಡ್ ಹೆಚ್ಚಳಕ್ಕೇನು ಕಾರಣ?:ರಾಜ್ಯದ ನಾನಾ ಭಾಗದಿಂದ ಬಂದು ನಗರದಲ್ಲಿರುವ ವಲಸೆ ಹಾಗೂ ಕೂಲಿ ಕಾರ್ಮಿಕರ ಪ್ರದೇಶಗಳಲ್ಲಿ ಸಹ ಸೋಂಕು ಹೆಚ್ಚಾಗಿದೆ. ಅಲ್ಲದೇ ಇತ್ತೀಚೆಗೆ ನೆರೆ ರಾಜ್ಯ ಹಾಗೂ ವಿದೇಶಗಳಿಗೆ ಜನರು ನಗರದಿಂದ ಹೋಗುವುದು ಮತ್ತು ಮರಳುವುದು ಕೂಡಾ ಇದಕ್ಕೆ ಕಾರಣವೆನ್ನಲಾಗುತ್ತಿದೆ.

ಇದನ್ನೂ ಓದಿ:ಎಟಿಎಂನಿಂದ ಹಣ ತೆಗೆಯುವವರೆಗೂ ಹಿಂಬದಿ ನಿಂತು ಆಮೇಲೆ ದರೋಡೆ ಮಾಡಿದ ಗ್ಯಾಂಗ್​!

ಮಹಾದೇವಪುರದಲ್ಲಿ ಹೆಚ್ಚು ಸೋಂಕು:ಬೆಳ್ಳಂದೂರು ಒಂದರಲ್ಲೇ 1.30 ಲಕ್ಷ ಜನಸಂಖ್ಯೆಯಿದೆ. ವರ್ತೂರು, ಹಗದೂರಿನಲ್ಲಿ ಸುಮಾರು 60 ಸಾವಿರ ಜನರು ನೆಲೆಸಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಆ ಭಾಗದಲ್ಲಿ ಸೋಂಕಿನ ಅಬ್ಬರ ಹೆಚ್ಚಿದೆ ಎಂದು ಮಹಾದೇವಪುರದ ಬಿಬಿಎಂಪಿ ಆರೋಗ್ಯಾಧಿಕಾರಿ ಡಾ. ಸುರೇಂದರ್ ಹೇಳಿದ್ದಾರೆ.

ABOUT THE AUTHOR

...view details