ಬೆಂಗಳೂರು: ಒಮಿಕ್ರಾನ್ ಏರಿಕೆಯಾಗುತ್ತಿರುವ ಭೀತಿಯ ನಡುವೆಯೇ ನಗರದ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದು ವಾರದ ಅಂತರದಲ್ಲಿ ಸಾವಿರಕ್ಕೆ ಏರಿಕೆಯಾಗಿದೆ. ಇಂದು 1041 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 9,575 ತಲುಪಿದೆ. ಮೂವರು ಮೃತಪಟ್ಟಿದ್ದು, ಇಂದು 134 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಗು ಸಿಸಿಸಿ ಕೇಂದ್ರದಲ್ಲಿ ಜನವರಿ 2ರ ವರೆಗೆ ಜನರಲ್ ಬೆಡ್‌ನಲ್ಲಿ 17 ಮಂದಿ, ಹೆಚ್ಡಿಯುನಲ್ಲಿ 30, ಐಸಿಯು ಬೆಡ್‌ನಲ್ಲಿ 6 ಮಂದಿ, ಐಸಿಯು+ವೆಂಟಿಲೇಟರ್ನಲ್ಲಿ 1, ಒಟ್ಟು 54 ಹಾಸಿಗೆಗಳಲ್ಲಿ ಕೋವಿಡ್ ರೋಗಿಗಳು ದಾಖಲಾಗಿದ್ದಾರೆ. ಸೋಂಕು ಹರಡುವಿಕೆಯಲ್ಲಿ ಕೋವಿಡ್ ಮೊದಲು ಹಾಗೂ 2ನೇ ಅಲೆಗಿಂತಲೂ 3ನೇ ಅಲೆಯಲ್ಲಿ ವೇಗವಾಗಿ ಹರಡುತ್ತಿದೆ.
ಮೂರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ಕಂಡುಬರುವ ಪ್ರದೇಶಗಳನ್ನು ಕ್ಲಸ್ಟರ್ಗಳನ್ನಾಗಿ ಮಾಡಲಾಗುತ್ತಿದೆ. ಆದರೂ ವೇಗವಾಗಿ ಹರಡುತ್ತಿದ್ದು, ಭೀತಿಗೆ ಕಾರಣವಾಗಿದೆ. ಆದರೆ, ಆಸ್ಪತ್ರೆ ಸೇರುತ್ತಿರುವವರ ಪ್ರಮಾಣ ಕಡಿಮೆ ಇರುವುದು ಸಮಾಧಾನಕರ ವಿಚಾರವಾಗಿದೆ.