ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು ಕೊರೊನಾ ಇಳಿಮುಖ: 789 ಜನರಲ್ಲಿ ಸೋಂಕು ದೃಢ - ರಾಜ್ಯದಲ್ಲಿಂದು ಕೊರೊನಾ ಇಳಿಮುಖ

ಕರ್ನಾಟಕದಲ್ಲಿ ಕಳೆದೊಂದು ದಿನದಲ್ಲಿ ಹೊಸದಾಗಿ ಪತ್ತೆಯಾದ ಕೋವಿಡ್‌ ಸಾವು-ನೋವು, ಗುಣಮುಖರು ಹಾಗು ಸಕ್ರಿಯ ಸೋಂಕು ಪ್ರಕರಣಗಳ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿಂದು ಕೊರೊನಾ ಇಳಿಮುಖ
ರಾಜ್ಯದಲ್ಲಿಂದು ಕೊರೊನಾ ಇಳಿಮುಖ

By

Published : Sep 24, 2021, 7:38 PM IST

ಬೆಂಗಳೂರು: ರಾಜ್ಯದಲ್ಲಿಂದು ಕೋವಿಡ್‌ ಸೋಂಕು ಪ್ರಮಾಣ ಇಳಿಕೆಯಾಗಿದೆ. ಹೊಸದಾಗಿ 789 ಮಂದಿಯಲ್ಲಿ ಮಾರಕ ಖಾಯಿಲೆಯ ಸೋಂಕು ಕಾಣಿಸಿಕೊಂಡಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 23 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 37,706ಕ್ಕೆ ತಲುಪಿದೆ. ಸಾವಿನ ಶೇಕಡಾವಾರು ಪ್ರಮಾಣ 2.91ರಷ್ಟಿದೆ.

ಇಂದು 1050 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ, 29,20,792 ಮಂದಿ ವಿವಿಧ ಆಸ್ಪತ್ರೆಗಳಿಂದ ಚೇತರಿಕೆ ಕಂಡು ಬಿಡುಗಡೆಯಾಗಿದ್ದಾರೆ

ಬೆಂಗಳೂರು ವಿಮಾನ ನಿಲ್ದಾಣದಿಂದ 791 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ಇವರ ಪೈಕಿ 179 ಮಂದಿ ಯುಕೆಯಿಂದ ಆಗಮಿಸಿದ್ದಾರೆ.

ಶುಕ್ರವಾರ 1,35,581 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 29,71,833 ತಲುಪಿದೆ.

ABOUT THE AUTHOR

...view details